ಉತ್ತರ ಪ್ರದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣಲಿದ್ದೀರಿ ಎಂದಿರುವ ಆದಿತ್ಯನಾಥ್, ಉತ್ತರ ಪ್ರದೇಶ ದೇಶದ ಭ್ರಷ್ಟಾಚಾರ ಮುಕ್ತ ರಾಜ್ಯವಾಗಲಿದೆ, ಹಾಗೂ ಅರಾಜಕತೆ ಮತ್ತು ಗೂಂಡಾಗಿರಿಯಿಂದ ಮುಕ್ತವಾಗಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ.

ನವದೆಹಲಿ (ಮಾ.21): ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯೋಗಿ ಆದಿತ್ಯನಾಥ್ ಸಂಸತ್ತಿನಲ್ಲಿ ಇಂದು ಮಾಡಿರುವ ಕೊನೆಯ ಭಾಷಣದಲ್ಲಿ ಕೋಮುಶಕ್ತಿಗಳಿಗೆ ಇನ್ಮುಂದೆ ಉತ್ತರ ಪ್ರದೇಶದಲ್ಲಿ ಜಾಗವಿಲ್ಲವೆಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣಲಿದ್ದೀರಿ ಎಂದಿರುವ ಆದಿತ್ಯನಾಥ್, ಉತ್ತರ ಪ್ರದೇಶ ದೇಶದ ಭ್ರಷ್ಟಾಚಾರ ಮುಕ್ತ ರಾಜ್ಯವಾಗಲಿದೆ, ಹಾಗೂ ಅರಾಜಕತೆ ಮತ್ತು ಗೂಂಡಾಗಿರಿಯಿಂದ ಮುಕ್ತವಾಗಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ.

ಸಂಸದ ಸ್ಥಾನಕ್ಕೆ ಇಂದು ರಾಜಿನಾಮೆ ನೀಡಿರುವ ಯೋಗಿ ತಮ್ಮ ಭಾಷಣದಲ್ಲಿ, ನೋಟು ಅಮಾನ್ಯನ ಕ್ರಮವು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದಿದ್ದಾರಲ್ಲದೇ, ಪ್ರಧಾನಿ ಮೋದಿ ಕಾರ್ಯಕ್ರಮಗಳನ್ನು ಶ್ಲಾಘಿಸಿದ್ದಾರೆ.

ದೇಶವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಗ ಮೋದಿ ದೇಶದ ನೇತೃತ್ವ ವಹಿಸಿದ್ದಾರೆ, ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಹಣಕಾಸು ಸಚಿವರು ಯಶಸ್ವಿಯಾಗಿದ್ದಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

ಕೇಂದ್ರದ ಜನಧನ್ ಯೋಜನೆಯು ಬಡವರ ಅಭಿವೃದ್ಧಿಗೆ ನೆರವಾಗಿದೆ, ಹಾಗೂ ಯೋಜನೆಗಳು ಎಲ್ಲರಿಗೂ ತಲುಪುವಂತೆ ಮಾಡುವ ಮೂಲಕ ಮನೆ ಮಾತಾಗಿದ್ದಾರೆ, ಎಂದು ಆದಿತ್ಯನಾಥ್ ಹೇಳಿದ್ದಾರೆ.

ಸಂಸತ್ತಿನಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದ ಆದಿತ್ಯನಾಥ್, ಯಾವುದೇ ಸಮಸ್ಯೆ ಇರಲಿ ಕೂತು ಬಗೆಹರಿಸಿಕೊಳ್ಳೋಣವೆಂದಿದ್ದಾರೆ.

ಮೋದಿಯವರು ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ, ನಾನು ನನ್ನ ಪಕ್ಷ, ಪ್ರಧಾನಿಯವರಿಗೆ ಆಭಾರಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.

ಯೋಗಿ ಹಾಸ್ಯಚಟಾಕಿ:

ತನ್ನ ಭಾಷಣದಲ್ಲಿ ಹಾಸ್ಯಚಟಾಕಿ ಹಾರಿಸಿದ ಆದಿತ್ಯನಾಥ್, ನಾನು ಅಖಿಲೇಶ್’​ಗಿಂತ 1 ವರ್ಷ ದೊಡ್ಡವನು ಹಾಗೂ ರಾಹುಲ್’​ಗಿಂತ 1 ವರ್ಷ ಚಿಕ್ಕವನು, ಅವರಿಬ್ಬರ ಜೋಡಿ ಮಧ್ಯೆ ನಾನು ಎದ್ದು ಬಂದಿದ್ದೇನೆ, ಅವರಿಬ್ಬರ ವೈಫಲ್ಯದಿಂದ ನಾವು ಗೆದ್ದು ಬಂದಿದ್ದೇವೆ, ಎಂದು ಹೇಳಿದ್ದಾರೆ.