ಮೇಘಾಲಯ ಗಣಿ ಕಾರ್ಮಿಕರ ಕುರಿತು ಸುಳಿವಿಲ್ಲ| ಸತತ 16 ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ| ಇದುವೆಗೂ ಸಿಕ್ಕಿದ್ದು ಕೇವಲ 3 ಹೆಲ್ಮೆಟ್ ಗಳು ಮಾತ್ರ| ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ನೌಕಾಸೇನೆ ಮುಳುಗು ತಜ್ಞರು| ಪಶ್ಚಿಮ ಜೈಂತಿಯಾ ಹಿಲ್ಸ್ ಬಳಿಯ ಕಲ್ಲಿದ್ದಲು ಗಣಿಯಲ್ಲಿ ದುರಂತ
ಕ್ಸಾನ್(ಡಿ.29): ಇಲ್ಲಿನ ಪಶ್ಚಿಮ ಜೈಂತಿಯಾ ಹಿಲ್ಸ್ ಬಳಿಯ ಕಲ್ಲಿದ್ದಲು ಗಣಿಯಲ್ಲಿ ಕಳೆದ 16 ದಿನಗಳಿಂದ ಸಿಲುಕಿಕೊಂಡಿರುವ ಗಣಿ ಕಾರ್ಮಿಕರಿಗಾಗಿ ಶೋಧ ಮುಂದುವರೆದಿದೆ.

ಸತತ 16 ದಿನಗಳಿಂದ ರಕ್ಷಣಾ ಕಾರ್ಯ ಮುಂದುವರೆದಿದ್ದು, ಇದುವರೆಗೂ ಒಬ್ಬರನ್ನೂ ರಕ್ಷಣೆ ಮಾಡಲಾಗಿಲ್ಲ. ಈ ಮಧ್ಯೆ ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ಸೇರಿದ 3 ಹೆಲ್ಮೆಟ್ ಗಳು ದೊರೆತಿದ್ದು, ಕಾರ್ಮಿಕರು ಬದುಕಿರಬಹುದಾದ ಸಾಧ್ಯತೆ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿರುವ ನೌಕಾಸೇನೆ ಮುಳುಗು ತಜ್ಞರು ಮತ್ತು ವಾಯುಸೇನೆಯ ನೀರೆತ್ತುವ ಬೃಹತ್ ಪೈಪ್‌ಗಳ ಸಹಾಯದಿಂದ ಗಣಿಯಲ್ಲಿನ ಅಪಾರ ಪ್ರಮಾಣದ ನೀರನ್ನು ಹೊರ ಹಾಕಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರಗೆ ಕರೆತರುವಲ್ಲಿ ಸಫಲತೆ ದೊರಕಿಲ್ಲ.
