ಹುಬ್ಬಳ್ಳಿ :  ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜತೆಯಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಯಾವುದೇ ಗುಪ್ತಸಭೆ ನಡೆಸಿಲ್ಲ. ಬದಲಿಗೆ ಔತಣಕೂಟಕ್ಕೆ ಹೋಗಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸಮರ್ಥಿಸಿಕೊಂಡಿದ್ದಾರೆ. 

ಕುಂದಗೋಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಊಟಕ್ಕೆ ಕರೆದರೆ ಹೋಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. 

'ಬಿಜೆಪಿಗಿಂತ ಸಾವೇ ಮೇಲು!'

ಅಲ್ಲದೇ, ಒಂದು ವೇಳೆ ನನಗೆ ಆಹ್ವಾನ ನೀಡಿದ್ದರೂ ನಾನೂ ಊಟಕ್ಕೆ ಹೋಗುತ್ತಿದ್ದೆ. ಹೀಗೆ ಊಟಕ್ಕೆ ಹೋಗಿದ್ದನ್ನೇ ಅನ್ಯಥಾ ಭಾವಿಸುವುದು ಸರಿಯಲ್ಲ ಎಂದರು.