ಟಾಟಾ ಸನ್ಸ್ ಸಂಸ್ಥೆಗೆ ಮಧ್ಯಂತರ ಅವಧಿ ಚೇರ್ ಮನ್ ಆಗಿರುವ ರತನ್ ಟಾಟಾ ಸದ್ಯದಲ್ಲಿ ಟಾಟಾ ಟ್ರಸ್ಟ್ ಚೇರ್ ಮನ್ ಸ್ಥಾನದಿಂದ ಕೆಳಗಿಳಿಯುವ ಯೋಚನೆಯಿಲ್ಲವೆಂದು ಹೇಳಿದ್ದಾರೆ.
ನವದೆಹಲಿ (ಡಿ.16): ಟಾಟಾ ಸನ್ಸ್ ಸಂಸ್ಥೆಗೆ ಮಧ್ಯಂತರ ಅವಧಿ ಚೇರ್ ಮನ್ ಆಗಿರುವ ರತನ್ ಟಾಟಾ ಸದ್ಯದಲ್ಲಿ ಟಾಟಾ ಟ್ರಸ್ಟ್ ಚೇರ್ ಮನ್ ಸ್ಥಾನದಿಂದ ಕೆಳಗಿಳಿಯುವ ಯೋಚನೆಯಿಲ್ಲವೆಂದು ಹೇಳಿದ್ದಾರೆ.
ಟಾಟಾ ಟ್ರಸ್ಟ್ ಜಗತ್ತಿನಾದ್ಯಂತ 108 ಬಿಲಿಯನ್ ಡಾಲರ್ ವಹಿವಾ ಹೊಂದಿದ್ದು ಶೇ.66 ರಷ್ಟು ಟಾಟಾ ಸನ್ಸ್ ನ್ನು ನಿಯಂತ್ರಿಸುತ್ತಿದೆ.
ಟಾಟಾ ಟ್ರಸ್ಟ್ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ನಾನು ಇದರಲ್ಲಿ ಭಾಗಿಯಾಗಿದ್ದೇನೆ. ಹಾಗಾಗಿ ಟ್ರಸ್ಟ್ ನಲ್ಲಿ ಮುಂದುವರೆಯುತ್ತಿದ್ದೇನೆ ಎಂದು ಟಾಟಾ ಹೇಳಿದ್ದಾರೆ.
ಟಾಟಾ ಟ್ರಸ್ಟ್ ಗೆ ಸಲಹೆ ಸೂಚನೆಗಳನ್ನು ನೀಡಲು ಬಾಹ್ಯ ಸಲಹೆಗಾರರ ನೇಮಕ ಮತ್ತು ನೂತನ ಚೇರ್ ಮನ್ ಆಯ್ಕೆ ಪ್ರಕ್ರಿಯೆ ಮುಂದಿನ ವರ್ಷ (2017) ರ ಮಧ್ಯಭಾಗದಲ್ಲಿ ಮುಗಿಯಲಿದೆ ಎಂದು ಕಂಪನಿ ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿತ್ತು. ಈ ವರದಿಯನ್ನು ಟಾಟಾ ನಿರಾಕರಿಸಿದ್ದಾರೆ.
