ಈ ಘಟನೆಯ ನಂತರ ಗ್ರಾಹಕರ ಪ್ರಾಣದ ಹಿತದೃಷ್ಟಿಯಿಂದ ಬೈಕ್'ನಿಂದ ಕೆಳಗಿಳಿದರಷ್ಟೆ

ಪೆಟ್ರೋಲ್ ಕಂಪನಿಗಳು ವಾಹನ ಸವಾರರು ತಮ್ಮ ಬೈಕ್'ನಿಂದ ಕೆಳಗಿಳಿದರಷ್ಟೆ ಸ್ಟೂಟರ್'ಗಳಿಗೆ ಪೆಟ್ರೋಲ್ ಹಾಕಬೇಕೆಂಬ ಕಠಿಣ ನಿಯಮವನ್ನು ಜಾರಿಗೊಳಿಸಿವೆ. ಈ ರೀತಿಯ ನಿಯಮವನ್ನು ಜಾರಿಗೊಳಿಸಲು ಪ್ರಮುಖ ಕಾರಣವೂ ಇದೆ. ನ.25 ರಂದು ಕರ್ನಾಟಕದ ಕಲಬುರಗಿಯ ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಬೈಕ್'ನ ದೋಷದಿಂದಾಗಿ ಬೈಕ್'ಗೆ ಬೆಂಕಿ ಹೊತ್ತಿಹೊಂಡು ಸಂಪೂರ್ಣ ಬೈಕ್ ಭಸ್ಮವಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಘಟನೆಯ ನಂತರ ಗ್ರಾಹಕರ ಪ್ರಾಣದ ಹಿತದೃಷ್ಟಿಯಿಂದ ಬೈಕ್'ನಿಂದ ಕೆಳಗಿಳಿದರಷ್ಟೆ ಪೆಟ್ರೋಲ್ ಭರ್ತಿ ಮಾಡಬೇಕೆಂದು ಬಂಕ್'ನ ಸಿಬ್ಬಂದಿಗಳಿಗೆ ಪೆಟ್ರೋಲ್ ಕಂಪನಿಗಳು ಸೂಚನೆ ನೀಡಿದೆ. ಆದರೆ ಅಂದಿನಿಂದ ಶೆಲ್ ಬಂಕ್ ಗಳನ್ನು ಹೊರತು ಪಡಿಸಿ ಉಳಿದ ಯಾವ ಬಂಕ್'ಗಳು ಈ ನಿಯಮವನ್ನು ಪಾಲಿಸುತ್ತಿಲ್ಲ.