ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಗೆಲುವಿಗಾಗಿ ವಿವಿಧ ಪಕ್ಷಗಳು ಕಸರತ್ತು ನಡೆಸುತ್ತಿವೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಸಕಲ ಪಕ್ಷಗಳು ತಮ್ಮ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿವೆ.

ಆದರೆ ಈ ರಾಜ್ಯದಲ್ಲಿ ಇದುವರೆಗೂ ಖಾತೆ ತೆರೆಯದ ಬಿಜೆಪ ಈ ಬಾರಿ ಖಾತೆ ತೆರೆಯಲಿದೆಯಾ ಎನ್ನುವುದು ಕಾದು ನೋಡಬೇಕಿದೆ. 

ಲೋಕಸಭಾ ಚುನಾವಣೆ : ಇಲ್ಲಿನ ಚದುರಂಗದಾಟದಲ್ಲಿ ಬಿಜೆಪಿಗೆ ಮೇಲುಗೈ

ಲೋಕಸಭಾ ಚುನಾವಣೆ 2019ರಲ್ಲಿ  ಮೋದಿ ಅಲೇ ಈ ಬಾರಿ ಕೇರಳದಲ್ಲಿ ಪ್ರಭಾವ ಬೀರಲಿದೆಯಾ ಎನ್ನುವುದನ್ನು ನೋಡಬೇಕಿದೆ.  

ರಾಜ್ಯ ಸಮರ: ಮಹಾಗಠಬಂಧನಕ್ಕೆ ಮೋದಿ-ನಿತೀಶ್ ಸಡ್ಡು

ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಸಲ ಲೋಕಸಭೆಗೆ ಖಾತೆ ತೆರೆದಿದ್ದು 1998ರಲ್ಲಿ.

ಆದರೆ ಕೇರಳದಲ್ಲಿ ಈವರೆಗೂ ಆ ಪಕ್ಷದ ಸದಸ್ಯರು ಲೋಕಸಭೆಗೆ ಆಯ್ಕೆಯಾಗಿಲ್ಲ. 2014 ರಲ್ಲಿ ಕೇವಲ 15 ಸಾವಿರ ಮತಗಳಿಂದ ತಿರುವನಂತಪುರ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ತಪ್ಪಿಸಿಕೊಂಡಿತು.