ಮದುವೆ ವಿಧೇಯಕ 2016ನ್ನು ಮುಂದಿನ ಲೋಕಸಭೆ ಅಧಿವೇಶನದಲ್ಲಿ ಖಾಸಗಿ ವಿಧೇಯಕವಾಗಿ ಚರ್ಚೆಗೆ ಸ್ವೀಕರಿಸುವ ಸಾಧ್ಯತೆಗಳಿವೆ.

ನವದೆಹಲಿ(ಫೆ.16): ವೈಭವೋಪೇತ ಮದುವೆಗೆ ಕಡಿವಾಣ ಹಾಕಬೇಕೆಂಬ ಮಹತ್ವದ ಖಾಸಗಿ ವಿಧೇಯಕವೊಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆಯಲ್ಲಿ ವೈಭವದ ಪ್ರದರ್ಶನ ನಿಲ್ಲಬೇಕು, ಯಾವುದೇ ಕುಟುಂಬ ಐದು ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದರೆ ಆ ಮೊತ್ತದ ಶೇಕಡಾ 10ರಷ್ಟನ್ನು ಬಡ ಕುಟುಂಬಗಳ ಮದುವೆಗೆ ಕೊಡುಗೆಯಾಗಿ ನೀಡಬೇಕು ಎಂದು ಸಂಸದ ಪಪ್ಪು ಯಾದವ್‌ ಅವರ ಪತ್ನಿ ಕಾಂಗ್ರೆಸ್‌ ಸಂಸದೆ ರಂಜಿತ್‌ ರಂಜನ್‌ ಮಂಡಿಸಿರುವ ವಿಧೇಯಕದಲ್ಲಿ ಆಗ್ರಹಿಸಲಾಗಿದೆ. ಮದುವೆ ವಿಧೇಯಕ 2016ನ್ನು ಮುಂದಿನ ಲೋಕಸಭೆ ಅಧಿವೇಶನದಲ್ಲಿ ಖಾಸಗಿ ವಿಧೇಯಕವಾಗಿ ಚರ್ಚೆಗೆ ಸ್ವೀಕರಿಸುವ ಸಾಧ್ಯತೆಗಳಿವೆ.

ವೈಭವೋಪೇತ ಅಬ್ಬರ ಮತ್ತು ಅನವಶ್ಯಕ ಖರ್ಚುಗಳನ್ನು ತಡೆಯುವುದು ಮತ್ತು ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ವಿಧೇಯಕ ಮಂಡಿಸಿದ್ದಾಗಿ ರಂಜಿತ್‌ ಹೇಳಿದ್ದಾರೆ.

ವಿಧೇಯಕದಪ್ರಸ್ತಾಪಗಳು

  • 5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಬಯಸುವ ಕುಟುಂಬಗಳು ಮೊದಲೇ ಸಂಬಂಧಿತ ಇಲಾಖೆ ಮುಂದೆ ಘೋಷಿಸಬೇಕು.
  • ಖರ್ಚು ಮಾಡುವ ಮೊತ್ತದ 10 ಶೇಕಡಾ ಹಣವನ್ನು ಬಡ ಕುಟುಂಬಗಳ ಹೆಣ್ಮಕ್ಕಳ ಮದುವೆ ಕಾಣಿಕೆಯಾಗಿ ನೀಡಬೇಕು.
  • ಹಣವನ್ನು ಸಂಗ್ರಹಿಸಲು ಸರಕಾರ ಕಲ್ಯಾಣ ನಿಧಿಯನ್ನು ಸ್ಥಾಪಿಸಬೇಕು.
  • 60 ದಿನಗಳ ಒಳಗೆ ನೋಂದಣಿ ಮಾಡಿಸಬೇಕು.
  • ಮತ್ತು ಆರತಕ್ಷತೆಗೆ ಬರುವ ಅತಿಥಿಗಳು ಮತ್ತು ಬಂಧುಗಳ ಸಂಖ್ಯೆಗೂ ಸರಕಾರ ಮಿತಿಯನ್ನು ಹೇರಲು ಅವಕಾಶವಿದೆ.
  • ವೇಸ್ಟ್‌ ಆಗುವುದನ್ನು ತಡೆಯಲು ಊಟದಲ್ಲಿ ಬಳಸುವ ಖಾದ್ಯಗಳ ಸಂಖ್ಯೆಗೂ ಮಿತಿ ಹೇರುವ ಬಗ್ಗೆ ಚಿಂತಿಸಬಹುದು.

ಕರ್ನಾಟಕದಲ್ಲೂ ಅದ್ಧೂರಿ ಮದುವೆಗೆ ಕಡಿವಾಣ

ಇದೇ ವೇಳೆ, ಅದ್ಧೂರಿ ಮದುವೆಗೆ ಕಡಿವಾಣ ಹಾಕುವ ಬಗ್ಗೆ ಕರ್ನಾಟಕ ಸರಕಾರವೂ ಚಿಂತನೆ ನಡೆದಿತ್ತು. ರಾಜ್ಯದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಬಹಿರಂಗವಾಗಿ ಈ ಬಗ್ಗೆ ಮಾತನಾಡಿದ್ದರು. ಆದರೆ, ವಿಧೇಯಕ ಮಂಡನೆಯಾಗಿರಲಿಲ್ಲ. ಈಗ ಕೇಂದ್ರ ಸರಕಾರ ಏನು ಮಾಡುತ್ತದೆ ಕಾದು ನೋಡಬೇಕು. ಕರ್ನಾಟಕದಲ್ಲೂ ಅದ್ಧೂರಿ ಮದುವೆಗೆ ಕಡಿವಾಣ ಹಾಕಲು ಸಚಿವ ರಮೇಶ್ ಕುಮಾರ್ ಸೇರಿದಂತೆ ಹಲವರು ಬೆಂಲಿಸಿದ್ದಾರೆ.