ಮಹದಾಯಿ ಕುಡಿಯುವ ನೀರು ಹಂಚಿಕೆ ವಿಷಯದಲ್ಲಿ ಕೇವಲ ಸಭೆ ನಡೆಸುವುದರಿಂದ ಪ್ರಯೋಜನವಾಗದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಹಾಸನ (ಡಿ.23): ಮಹದಾಯಿ ಕುಡಿಯುವ ನೀರು ಹಂಚಿಕೆ ವಿಷಯದಲ್ಲಿ ಕೇವಲ ಸಭೆ ನಡೆಸುವುದರಿಂದ ಪ್ರಯೋಜನವಾಗದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಕರ್ನಾಟಕಕ್ಕೆ ಎಷ್ಟು ಕುಡಿಯುವ ನೀರು ಕೊಡಬೇಕು ಎಂಬುದು ನ್ಯಾಯಾಧಿಕರಣದ ಮುಂದೆಯೇ ತೀರ್ಮಾನವಾಗಬೇಕು ಎಂಬ ಗೋವಾ ಸಿಎಂ ಹೇಳಿಕೆಗೆ ನನ್ನ ಸಹಮತವೂ ಇದೆ.
ಆದರೆ ನಾವೇ ಯಾವುದೇ ತೀರ್ಮಾನ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಅಭಿಪ್ರಾಯದಂತೆ ನ್ಯಾಯಾಧಿಕರಣ ನೀರು ಹಂಚಿಕೆ ನಿಗದಿ ಮಾಡಿದ ನಂತರವೂ ಚರ್ಚೆಗೆ ಗ್ರಾಸವಾಗಲಿದೆ. ಹೀಗಾಗಿ ಇದು ಬಗೆಹರಿಯದ ಸಮಸ್ಯೆ ಎಂದರು.
