ಬೆಂಗಳೂರು (ಮಾ. 19): ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಜೀವಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ನೀಡದಿರುವ ಹಿನ್ನೆಲೆಯಲ್ಲಿ ಕೃಪಾಂಕ ನೀಡುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ನಾಮಪತ್ರ ಹೀಗೆ ಸಲ್ಲಿಸಿ, ಶಸ್ತ್ರ ಹೀಗೆ ಒಪ್ಪಿಸಿ: ಮತದಾನಕ್ಕೆ ಸಜ್ಜಾಯ್ತು ರಾಜಧಾನಿ!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಯು ಇಲಾಖೆ ನಿರ್ದೇಶಕ ಪಿ.ಸಿ. ಜಾಫರ್‌, ಮಾ.14ರಂದು ನಡೆದ ಜೀವಶಾಸ್ತ್ರ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗಳು ಮತ್ತು ಪ್ಯಾಟರ್ನ್‌ ಬದಲಾಯಿಸಿ ಪ್ರಶ್ನೆಗಳನ್ನು ಕೇಳಲಾಗಿದೆ. ವಿದ್ಯಾರ್ಥಿಗಳು ಉತ್ತರಿಸಲು ಕಷ್ಟವಾಗಿದೆ. ಹೀಗಾಗಿ, ಕೃಪಾಂಕ ನೀಡಬೇಕೆಂದು ಪಾಲಕರು ಮತ್ತು ವಿದ್ಯಾರ್ಥಿಗಳು ಇಲಾಖೆಯನ್ನು ಒತ್ತಾಯಿಸಿದ್ದರು. ಆದರೆ, ಎನ್‌ಸಿಇಆರ್‌ಟಿ ಪಠ್ಯಕ್ರಮದ ಪ್ರಶ್ನೆಗಳನ್ನೇ ಕೇಳಲಾಗಿದ್ದು, ಕೃಪಾಂಕ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಅತೀ ಭಯಂಕರ: 'ಈಗ' ಮುಂಬೈ ದಾಳಿ ಖಂಡಿಸಿದ ಚೀನಾ!

ಪ್ರಶ್ನೆಪತ್ರಿಕೆ ಪರಿಶೀಲನೆಗಾಗಿ ರಚಿಸಿದ್ದ ಸಮಿತಿಯು ವರದಿ ನೀಡಿದೆ. ಆ ಪ್ರಕಾರ, ಜೀವಶಾಸ್ತ್ರದಲ್ಲಿ ಒಟ್ಟಾರೆ ಬಹು ಆಯ್ಕೆ ಸೇರಿ 105 ಅಂಕಗಳಿಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪೈಕಿ ವಿದ್ಯಾರ್ಥಿಗಳು 70 ಅಂಕಗಳಿಗೆ ಮಾತ್ರ ಉತ್ತರಿಸಬೇಕಾಗಿತ್ತು. ಜ್ಞಾನ ಆಧಾರಿತ 46 ಅಂಕಗಳು, ಕೌಶಲ್ಯಾಧಾರಿತ 11 ಅಂಕಗಳು ಮತ್ತು ಅರ್ಥ ಮಾಡಿಕೊಳ್ಳುವ 48 ಅಂಕಗಳಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಕೆಲವು ಪ್ರಶ್ನೆಗಳನ್ನು ನೇರವಾಗಿ ಕೇಳುವ ಬದಲು ಪರೋಕ್ಷವಾಗಿ ಕೇಳಲಾಗಿದೆ ಎಂದು ತಿಳಿಸಿದರು.