ಬಿಜಿಂಗ್(ಮಾ.19):ಮುಂಬೈ ಉಗ್ರ ದಾಳಿ ನಡೆದ 11 ವರ್ಷಗಳ ಬಳಿಕ, ಚೀನಾ ದಾಳಿಯನ್ನು 'ಮೋಸ್ಟ್ ನಟೋರಿಯಸ್' ಎಂದು ಅಧಿಕೃತವಾಗಿ ಖಂಡಿಸಿದೆ.

ಜಾಗತಿಕ ಭಯೋತ್ಪಾದನೆ ಕುರಿತು ಶ್ವೇತಪತ್ರ ಹೊರಡಿಸಿರುವ ಚೀನಾ, ಕ್ಸಿಂಜಿಯಾಂಗ್ ಪ್ರಾಂತ್ಯದ ಉಗ್ರ ದಾಳಿಯೂ ಸೇರಿದಂತೆ ಜಗತ್ತಿನ ಹಲವಡೆ ನಡೆದ ಉಗ್ರ ದಾಳಿಗಳನ್ನು ಖಂಡಿಸಿದೆ.

ಈ ಪೈಕಿ 200ರ ಮುಂಬೈ ಉಗ್ರ ದಾಳಿಯನ್ನು ಮೋಸ್ಟ್ ನಟೋರಿಯಸ್ ಎಂದು ಕರೆದಿರುವ ಚೀನಾ, ದಶಕಗಳಿಂದಲೂ ಜಗತ್ತಿನ ಮೂಲೆ ಮೂಲೆಗೂ ಪಸರಿಸಿರುವ ಭಯೋತ್ಪಾದನೆ ಮಾನವೀಯತೆಯ ಮೇಲೆ ದಾಳಿ ಮಾಡುತ್ತಿದೆ ಎಂದು ಹೇಳಿದೆ.

ಜಾಗತಿಕ ಭಯೋತ್ಪಾದನೆಯನ್ನು ಮಟ್ಟಹಾಕಲು ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದಿರುವ ಚೀನಾ, ಈ ನಿಟ್ಟಿನಲ್ಲಿ ಎಲ್ಲ ದೇಶಗಳೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದೆ.

ಅಲ್ಲದೆ ಬಡತನ ನಿರ್ಮೂಲನೆ, ಶಿಕ್ಷಣದ ಮೂಲಕ ಭಯೋತ್ಪಾದನೆ ನಿಗ್ರಹ ಸಾಧ್ಯ ಎಂದೂ ಚೀನಾ ಆಶಾವಾದ ವ್ಯಕ್ತಪಡಿಸಿದೆ.