ಕೊಪ್ಪಳದಲ್ಲಿ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ಈಗಾಗಲೇ ಬಿಜೆಪಿಯಲ್ಲಿ ಕೆಲವೊಂದು ಶಾಸಕರ ವೈಮನಸ್ಸು ಆರಂಭವಾಗಿದೆ. ಮಾಜಿ ಸಚಿವ ವಿ ಸೋಮಣ್ಣ ಬಹಿರಂಗವಾಗಿ ಯಡಿಯೂರಪ್ಪ  ವಿರುದ್ಧ ಮಾತನಾಡಿದ್ದಾರೆ. ಸೋಮಣ್ಣ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್​’ನ ಶಾಸಕರು ಸೇರಿದಂತೆ 40 ರಿಂದ 50 ಕ್ಕೂ ಹೆಚ್ಚು ಜನ ಕಾಂಗ್ರೆಸ್​​ಗೆ ಬರಬಹುದು ಎಂದು  ಹೇಳಿದ್ದಾರೆ.

ಕೊಪ್ಪಳ (ಜ.24): ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿದ್ದು, ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕೊಪ್ಪಳದಲ್ಲಿ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ಈಗಾಗಲೇ ಬಿಜೆಪಿಯಲ್ಲಿ ಕೆಲವೊಂದು ಶಾಸಕರ ವೈಮನಸ್ಸು ಆರಂಭವಾಗಿದೆ. ಮಾಜಿ ಸಚಿವ ವಿ ಸೋಮಣ್ಣ ಬಹಿರಂಗವಾಗಿ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ಸೋಮಣ್ಣ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್​’ನ ಶಾಸಕರು ಸೇರಿದಂತೆ 40 ರಿಂದ 50 ಕ್ಕೂ ಹೆಚ್ಚು ಜನ ಕಾಂಗ್ರೆಸ್​​ಗೆ ಬರಬಹುದು ಎಂದು ಹೇಳಿದ್ದಾರೆ.

2008ರಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾದಾಗ ಯಡಿಯೂರಪ್ಪಗೆ ಅನುಕಂಪ ಹಾಗೂ ಜನಪ್ರಿಯತೆ ಇತ್ತು. ಅಂತಹ ವೇಳೆಯಲ್ಲಿಯೇ ಬಿಜೆಪಿಯವರು ಕೇವಲ 110 ಸ್ಥಾನಗಳನ್ನು ಮಾತ್ರ ಗೆಲ್ಲಲು ಕಾರಣವಾಯಿತು. ಆದರೆ ಆವಾಗಿನ ಜನಪ್ರಿಯತೆ ಹಾಗೂ ಅನುಕಂಪ ಈಗ ಇಲ್ಲ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವವರು ಹಾಗೂ ಅಸಮಧಾನ ಇರುವ ಕಾಂಗ್ರೆಸ್​​’ನವರು ಒಂದಿಬ್ಬರು ಬೇರೆ ಪಕ್ಷಗಳಿಗೆ ಹೋಗಬಹುದು ಎಂದು ರಾಯರೆಡ್ಡಿ ಹೇಳಿದ್ದಾರೆ.

ನಾನೂ ಸಹ ವೈಯ್ಯಕ್ತಿಕವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕ ಲಿಂಗಾಯತರಿಗೆ ಕೊಡಬೇಕೆಂದು ಮನವಿ ಮಾಡುತ್ತೇನೆ, ಆದರೆ ಅಂತಿಮವಾಗಿ ಇದರ ಬಗ್ಗೆ ಹೈಕಮಾಂಡ ನಿರ್ಧಾರ ಮಾಡುತ್ತದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.