ಬೆಂಗಳೂರು[ಜು. 18] ದೋಸ್ತಿ ಸರ್ಕಾರಕ್ಕೆ ಇನ್ನು ಒಂದು ದಿನದ ಉಸಿರಾಟ ಸಿಕ್ಕಿದೆ. ತೀವ್ರ, ಗದ್ದಲ ಕೋಲಾಹಲಗಳ ನಡುವೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯದೆ ಕರ್ನಾಟಕ ವಿಧಾನಸಭೆ ಕಲಾಪವನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ.

ಒಂದು ಕಡೆ ಆಡಳಿತ ಪಕ್ಷದ ನಾಯಕರು ಮೊದಲು ವಿಪ್ ವಿಚಾರ ಚರ್ಚೆಯಾಗಬೇಕು, ಬಿಜೆಪಿಯ ಆಪರೇಶನ್ ಕಮಲಕ್ಕೆ ಧಿಕ್ಕಾರ ಎಂದು ಕೂಗುತ್ತಿದ್ದರು.

‘ಸಿದ್ಧ ಪುರುಷ’, ನೀವು ಮಾಡಿದ್ರೆ ಗರತೀತನ, ಬೇರೆಯವ್ರು ಮಾಡಿದ್ರೆ ಹಾದರನಾ?

ಇನ್ನೊಂದು ಕಡೆ ಬಿಜೆಪಿ ಸಿಎಂ ಈ ಮೊದಲು ಹೇಳಿದಂತೆ ಇಂದೇ ವಿಶ್ವಾಸಮತ ಯಾಚನೆ ಮಾಡಲಿ. ನಾವು ಇಂದು ವಿಧಾನಸೌಧಲ್ಲಿಯೇ ಇದ್ದೂ  ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಲು ಸ್ಪೀಕರ್ ರಮೇಶ್ ಕುಮಾರ್ ಹೋದ ಮೇಲೆ ಅವರ ಸ್ಥಾನಕ್ಕೆ ಉಪಸಭಾಪತಿ ಕೃಷ್ಣಾ ರೆಡ್ಡಿ ಬಂದು ಕುಳಿತಿದ್ದರು. ಅವರು ಬಂದ ಮೇಲೆ ಗಲಾಟೆ ಮತ್ತಷ್ಟು ಜೋರಾಯಿತು. ಇದೀಗ ಅಂತಿಮವಾಗಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಗುರುವಾರ ಬೆಳಗ್ಗೆ ಆರಂಭವಾದ ಕಲಾಪ ಗದ್ದಲ ಮತ್ತು ಗೊಂದಲದ ಗೂಡಾಗಿತ್ತು. ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದರೆ ಕಾನೂನು ಮತ್ತು ಸಂವಿಧಾನದ ಆಯಾಮಗಳು ಚರ್ಚೆಯಾದವು. ಕಲಾಪ ಮುಂದೂಡುವುದು ಮತ್ತೆ ಕರೆದಾಗ ಗಲಾಟೆ ಆರಂಭ ಇದೇ ಪ್ರಕ್ರಿಯೆ ಕಂಡುಬಂತು. ಅಂತಿಮವಾಗಿ ಇನ್ನು ಒಂದು ದಿನ ಕಾನೂನು ಮತ್ತು ಸಂವಿಧಾನದ ಸಾಧ್ಯಾಸಾಧ್ಯತೆಗಳ ಚರ್ಚೆಗೆ ಜನರಿಗೂ ಅವಕಾಶ ಸಿಕ್ಕಂತಾಗಿದೆ.