ವಿಜಯಪುರ[ಜು. 17]  ಮೈತ್ರಿ ಶಾಸಕರ ರಾಜೀನಾಮೆ ವಿಚಾರದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕಿಚಾಯಿಸಿದ್ದಾರೆ.

ಸಿಎಲ್ಪಿ ನಾಯಕ ಸಿದ್ದರಾಮಯ್ಯರನ್ನ ಹಿಗ್ಗಾಮುಗ್ಗಾ ಜಾಡಿಸಿದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸದನದಿಂದಲೇ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರಿನ ಸದನದಲ್ಲಿ ಕುಳಿತುಕೊಂಡು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಸಿದ್ದು ವಿರುದ್ಧ ವಾಗ್ದಾಳಿ. ಮುಖ್ಯಮಂತ್ರಿ ಆಗಿದ್ದಾಗ 7 ಜನ ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿದ್ದ "ಸಿದ್ಧ ಪುರುಷ" ನೀವು ಎಂದು ಸಿದ್ದರಾಮಯ್ಯರನ್ನ  ಯತ್ನಾಳ್ ಕುಟುಕಿದ್ದಾರೆ.

ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಂಡಿಸಿದ 'ಕ್ರಿಯಾಲೋಪ'  ಅಂದರೆ ಏನು?

ನೀವು ಮಾಡಿದರೇ  ಅದು ಗರತೀತನ, ಬೇರೆಯವರು ಮಾಡಿದ್ರೆ ಮಾತ್ರ ಹಾದರವೇ.? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ. ಬಿ.ಆರ್. ಪಾಟೀಲ ಯತ್ನಾಳ್ ಫೇಸ್ ಬುಕ್ ಪೇಜ್ ನಲ್ಲಿ ಸಿದ್ದು ವಿರುದ್ಧ ವಾಗ್ದಾಳಿ ನಡೆಸಲಾಗಿದೆ.