Asianet Suvarna News Asianet Suvarna News

ಸರ್ಕಾರ ಬೀಳುವುದಿಲ್ಲ ಎಂದು ಜೆಡಿಎಸ್ ಗೆ ನೆಮ್ಮದಿ

ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿರುವುದು ಜೆಡಿಎಸ್ ಪಾಳೆಯದಲ್ಲಿ ಗೊಂದಲಕ್ಕೆ ಕಾರಣವಾದರೂ ಪಕ್ಷ ಮತ್ತು ಸರ್ಕಾರ ಯಾವುದೇ ರೀತಿ ಯಲ್ಲಿಯೂ ಇಕ್ಕಟ್ಟಿಗೆ  ಸಿಲುಕುವುದಿಲ್ಲ ಎಂಬ ಆತ್ಮವಿಶ್ವಾಸದಲ್ಲಿ ಮುಂದುವರೆದಿದೆ. 

No Fear In JDS Leaders
Author
Bengaluru, First Published Sep 13, 2018, 10:02 AM IST

ಬೆಂಗಳೂರು :  ಬೆಳಗಾವಿ ರಾಜಕಾರಣದ ಬೆಳವಣಿಗೆಗಳನ್ನು  ಬಳಸಿಕೊಳ್ಳಲು ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿರುವುದು ಜೆಡಿಎಸ್ ಪಾಳೆಯದಲ್ಲಿ ಗೊಂದಲಕ್ಕೆ ಕಾರಣವಾದರೂ ಪಕ್ಷ ಮತ್ತು ಸರ್ಕಾರ ಯಾವುದೇ ರೀತಿ ಯಲ್ಲಿಯೂ ಇಕ್ಕಟ್ಟಿಗೆ ಸಿಲುಕುವುದಿಲ್ಲ ಎಂಬ ಆತ್ಮವಿಶ್ವಾಸದಲ್ಲಿ ಮುಂದುವರೆದಿದೆ. 

ಸಮ್ಮಿಶ್ರ ಸರ್ಕಾರದ ಪರಿಸ್ಥಿತಿ ಯು ಡೋಲಾಯಮಾನ ವಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸುತ್ತಿರುವುದರ ಜತೆಗೆ ರಾಜಕೀಯ ದಾಳಗಳನ್ನು ಉರುಳಿಸಲಾರಂಭಿಸಿದೆ. ಕಾಂಗ್ರೆಸ್ಸಿನ ಜಾರಕಿಹೊಳಿ ಸಹೋದರರು ತಮ್ಮ ಪಕ್ಷದ ವಿರುದ್ಧವೇ ತಿರುಗಿಬಿದ್ದಿರುವುದು ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದನ್ನೇ ತಮ್ಮ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ತಂತ್ರಗಾರಿಕೆ ಯಲ್ಲಿ ತೊಡಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಗೌಪ್ಯ ಚರ್ಚೆಗಳು ನಡೆಯುತ್ತಿರುವುದು ರಾಜಕಾರಣದಲ್ಲಿ ಆಪರೇಷನ್ ಕಮಲ ಭೀತಿ ಶುರುವಾಗಿದೆ. ಸದನದ ವಿಶ್ವಾಸ ಮತಯಾಚನೆಯಲ್ಲಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿರುವ ಕಾರಣ ಆರು ತಿಂಗಳ ಕಾಲ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ ಎಂಬುದು ಜೆಡಿಎಸ್ ಮುಖಂಡರ ಅನಿಸಿಕೆ.

ಕಾಂಗ್ರೆಸ್‌ನಲ್ಲಿನ ಕಿತ್ತಾಟವು ಸರ್ಕಾರದ ಮೇಲಾಗಲಿ ಅಥವಾ ಪಕ್ಷದ ಮೇಲಾಗಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೂ ಜೆಡಿಎಸ್‌ನ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ. ಏನಿದ್ದರೂ  ಕಾಂಗ್ರೆಸ್ ಶಾಸಕರೇ ಹೋಗಬೇಕು ಎಂಬುದು ದೃಢ ನಂಬಿಕೆ.

Follow Us:
Download App:
  • android
  • ios