ದುನಿಯಾ ವಿಜಿ ಮಗಳ ಮೇಲೆ ಹಲ್ಲೆ ಪ್ರಕರಣ! ತನಿಖೆ ಸೂಕ್ತ ದಾರಿಯಲ್ಲಿ ಸಾಗುತ್ತಿದೆ ಎಂದ ಡಿಸಿಪಿ ಅಣ್ಣಾಮಲೈ! ಗಿರಿನಗರ ಪೊಲೀಸರು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ! ಪ್ರಾಥಮಿಕ ತನಿಖೆಯಲ್ಲಿ ವಿಜಿ ಹಲ್ಲೆ ಮಾಡಿರುವುದು ಸಾಬೀತಾಗಿಲ್ಲ! ಹಲ್ಲೆ ಕುರಿತು ಸಿಸಿಟಿವಿಯಲ್ಲಿ ಪುರಾವೆ ದೊರೆತಿಲ್ಲ ಎಂದ ಅಣ್ಣಾಮಲೈ 

ಬೆಂಗಳೂರು(ಅ.24): ದುನಿಯಾ ವಿಜಿ ವಿರುದ್ಧ ಮಗಳಿಂದಲೇ ದೂರು ಪ್ರಕರಣದಲ್ಲಿ ಗಿರಿನಗರ ಪೊಲೀಸರು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನಿಖೆ ಸೂಕ್ತ ದಾರಿಯಲ್ಲಿ ಸಾಗುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ವಿಜಿ ಹಲ್ಲೆ ಮಾಡಿರುವುದು ಕಂಡು ಬಂದಿಲ್ಲಎಂದು ಅಣ್ಣಾಮಲೈ ತಿಳಿಸಿದ್ದಾರೆ.

ಮನೆಯ ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದು, ಹಲ್ಲೆ ಬಗ್ಗೆ ಯಾವುದೇ ಪುರಾವೆ ದೊರೆತಿಲ್ಲ ಎಂದು ಅಣ್ಣಾಮಲೈ ಮಾಹಿತಿ ನೀಡಿದರು. ಅಲ್ಲದೇ ಹಲ್ಲೆ ಪ್ರಕರಣ ಕುರಿತೇ ತನಿಖೆ ನಡೆಯುತ್ತಿರುವುದರಿಂದ ಯಾವುದೇ ಪುರಾವೆ ಸಿಗದ ಕಾರಣಕ್ಕೆ ಪ್ರಕರಣ ಬಹುತೇಕ ಮುಗಿದ ಹಾಗೆ ಭಾಸವಾಗುತ್ತಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದುನಿಯಾ ವಿಜಿಗೆ ಮತ್ತೊಂದು ಸಂಕಷ್ಟ: ಪುತ್ರಿಯಿಂದಲೇ ದೂರು ದಾಖಲು

ಮಗಳ ಮೇಲೆ ದುನಿಯಾ ವಿಜಿ ಹಲ್ಲೆ: ಫುಲ್ ಸ್ಟೋರಿ ಬಿಚ್ಚಿಟ್ಟ ಪತ್ನಿ ನಾಗರತ್ನಾ!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೊನಿಕಾ ಹೇಗಿದ್ದಾಳೆ?