Asianet Suvarna News Asianet Suvarna News

ದುನಿಯಾ ವಿಜಿಗೆ ಮತ್ತೊಂದು ಸಂಕಷ್ಟ: ಪುತ್ರಿಯಿಂದಲೇ ದೂರು ದಾಖಲು

ಮತ್ತಪಂದು ಸಂಕಷ್ಟಕ್ಕೆ ಸಿಲುಕಿದ ನಟ ದುನಿಯಾ ವಿಜಯ್. ಅಪ್ಪ ದುನಿಯಾ ವಿಜಿ ವಿರುದ್ಧವೇ ತಿರುಗಿಬಿದ್ದ ಮಗಳು. ದುನಿಯಾ ವಿಜಿ ವಿರುದ್ಧ ಮಗಳು ಮೋನಿಕಾ ದೂರು. ಏಕೆ? ಏನಾಯ್ತು? ಇಲ್ಲಿದೆ ಫುಲ್ ಡಿಟೇಲ್ಸ್.

Monica files FIR in Girinagar police station against her father actor Duniya Vijay
Author
Bengaluru, First Published Oct 23, 2018, 11:21 AM IST
  • Facebook
  • Twitter
  • Whatsapp

ಬೆಂಗಳೂರು, [ಅ.23]: ನಟ ದುನಿಯಾ ವಿಜಯ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗಷ್ಟೇ ಮಾರುತಿಗೌಡ ಹಲ್ಲೆ ಪ್ರಕರಣದಲ್ಲಿ ಜೈಲು ಹೋಗಿದ್ದ ದುನಿಯಾ ವಿಜಿಗೆ ಇದೀಗ ಮಗಳೇ ಕಂಟಕಳಾಗಿದ್ದಾಳೆ.

 ದುನಿಯಾ ವಿಜಿ 2ನೇ ಪತ್ನಿ ಕೀರ್ತಿಗೌಡ ಹಾಗೂ ಮೊದಲನೇ ಪತ್ನಿ ನಾಗರತ್ನಾ ನಡುವೆ ನಡೆಯುತ್ತಿದ್ದ ಜಟಾಪಟಿ ಇದೀಗ ತಂದೆ ಮಕ್ಕಳಿಗೆ ತಿರುಗಿದೆ.

"

 ಹೌದು, ಮೋನಿಕಾ ಸ್ವತಃ ತಂದೆ ದುನಿಯಾ ವಿಜಯ್ ವಿರುದ್ಧವೇ ಪೊಲೀಸ್ ಮೆಟ್ಟಿಲೇರಿದ್ದಾಳೆ. ನಿನ್ನೆ [ಸೋಮವಾರ] ವಿಜಿ ಮಗಳು ಮೋನಿಕಾ ಕೀರ್ತಿಗೌಡ ಮನೆಗೆ ತೆರಳಿದ್ದರು. ಈ ವೇಳೆ ಕೀರ್ತಿಗೌಡ ಮಾರಾಕಾಸ್ತ್ರಗಳನ್ನು ತೋರಿಸಿ  ಬೆದರಿಸಿ ಹಲ್ಲೆ ಮಾಡಿದ್ದಾರೆ ಎಂದು ವಿಜಿ ಮಗಳು ಮೋನಿಕಾ ಗಂಭೀರ ಆರೋಪ ಮಾಡಿದ್ದಾರೆ.

ಮೋನಿಕಾ  ಅವರು ತಂದೆ ದುನಿಯಾ ವಿಜಿ ಸೇರಿ 5 ಮಂದಿ ವಿರುದ್ಧ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾಳೆ. ಹಲ್ಲೆಗೊಳಗಾಗಿರುವ ಮೋನಿಕಾ ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow Us:
Download App:
  • android
  • ios