ಕುಮಾರಸ್ವಾಮಿ ಏರಿಗೆಳೆದ್ರೆ..ಜಮೀರ್ ನೀರಿಗೆಳೆದ್ರು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 4:01 PM IST
No cut in Anna Bhagya quantity, says Minister Zameer Ahmad Khan
Highlights

ಅನ್ನ ಭಾಗ್ಯ ಅಕ್ಕಿ ನೀಡಿಕೆಯ ವಿಚಾರ ಇದೀಗ ಮೖತ್ರಿ ಸರಕಾರದ ಹೊಂದಾಣಿಯ ಪ್ರಶ್ನೆ ಮಾಡುತ್ತಿದೆ. ಒಂದು ಕಡೆ ಸಿಎಂ ಕುಮಾರಸ್ವಾಮಿ 5 ಕೆಜಿ ಅಂದರೆ ಇನ್ನೊಂದು ಕಡೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ 7 ಕೆಜಿ ಅಂತಿದ್ದಾರೆ. ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯ ಮೈತ್ರಿ ಸರಕಾದಲ್ಲಿ ಗೊಂದಲದ ಭಾಗ್ಯವಾಗಿದೆ.

ಬೆಂಗಳೂರು[ಜು.24] ಅನ್ನಭಾಗ್ಯದ ಅಕ್ಕಿ ಐದು ಕೆಜಿಗೆ ಇಳಿಸುವ ಬಗ್ಗೆ ಸಿಎಂ ನನ್ನ ಜತೆ ಚರ್ಚೆ ನಡೆಸಿಲ್ಲ. ಸಿಎಂ ಅನ್ನಭಾಗ್ಯದ ಅಕ್ಕಿ ಕಡಿತ ಮಾಡುವ ಬಗ್ಗೆಯೂ ನನ್ನ ಜತೆ ಮಾತನಾಡಿಲ್ಲ. ಹಾಗೇನಾದರೂ ಅನ್ನಭಾಗ್ಯದ ಅಕ್ಕಿ ಕಡಿತ ಮಾಡುವುದಿದ್ದರೆ ಹೇಳಲೇಬೇಕಾಗಿತ್ತು. ನಾನು ಇಲಾಖೆಯ ಸಚಿವ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಮುಂದೆ  ಅನ್ನಭಾಗ್ಯದ ಅಕ್ಕಿ 7 ಕೆಜಿಯನ್ನೇ ನೀಡುತ್ತೇವೆ. ಈ ತಿಂಗಳು ಕೂಡ  ವ್ಯಕ್ತಿಗೆ 7 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಹೇಳಿದ್ದಾರೆ.ಆನ್ನಭಾಗ್ಯದ ಅಕ್ಕಿ 5 ಕೆಜಿ ನೀಡಲಾಗುವುದು ಎಂದು ಸಿಎಂ ಇನ್ನೊಂದು ಕಡೆ ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಒಂದು ಹೇಳಿಕೆ ನೀಡಿದರೆ  ಸಚಿವ ಜಮೀರ್ ಅಹಮದ್ ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ.

ಖರ್ಜೂರಕ್ಕೆ ಒಲಿದು ಬಂತು ಕಾರು : ಮತ್ತೆ ಕುಚುಕುಗಳಾದ ಗುರು ಶಿಷ್ಯರು

ಅನಿಲಭಾಗ್ಯ ಜಾರಿಯಲ್ಲಿ:  ಸಿಎಂ ಅನಿಲಭಾಗ್ಯ ಯೋಜನೆ ಫೆಬ್ರುವರಿಯಲ್ಲಿಯೇ ಕೊಡಬೇಕಾಗಿತ್ತು. ಫಲಾನುಭವಿಗಳಿಂದ 32 ಲಕ್ಷ ಅರ್ಜಿ ಬಂದಿವೆ. ಕೇಂದ್ರ ಸರಕಾರ ಗ್ಯಾಸ್ ಪೂರೈಕೆ ಮಾಡಲು ಒಪ್ಪಿದ್ದು 4200 ರೂ. ವೆಚ್ಚದಲ್ಲಿ ಗ್ಯಾಸ್ ಸ್ಟೌವ್ ಹಾಗೂ ಸಿಲಿಂಡರ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

loader