ಖರ್ಜೂರಕ್ಕೆ ಒಲಿದು ಬಂತು ಕಾರು : ಮತ್ತೆ ಕುಚುಕುಗಳಾದ ಗುರು ಶಿಷ್ಯರು

Zameer Ahmed Gits Fortuner instead of Innova
Highlights

  • ಇನ್ನೋವಾ ಬದಲಿಗೆ ಫಾರ್ಚೂನರ್ ಸರ್ಕಾರಿ ಪಡೆದ ಸಚಿವ ಜಮೀರ್ ಅಹ್ಮದ್ ಖಾನ್ 
  • ಗುರು-ಶಿಷ್ಯರು ಮತ್ತೆ ಕುಚುಕುಗಳಾಗಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ 

ಬೆಂಗಳೂರು[ಜು.02]: ತಾನು ಬಯಸಿದಂತೆ ಬಿಗ್ ಕಾರು ಪಡೆದುಕೊಳ್ಳಲು ಸಚಿವ ಜಮೀರ್ ಅಹ್ಮದ್ ಖಾನ್ ಯಶಸ್ವಿಯಾಗಿದ್ದಾರೆ.

ಮಾಜಿ ಪರಮಾಪ್ತನ ಬೇಡಿಕೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈಡೇರಿಸಿದ್ದು ಫಾರ್ಚೂನರ್ ಕಾರು ಜಮೀರ್ ಅವರಿಗೆ ದೊರಕಿದೆ. ಇತ್ತೀಚಿಗಷ್ಟೆ ಜಮೀರ್ ಉಮ್ರಾ ಯಾತ್ರೆಯಿಂದ ಖರ್ಜೂರ ತಂದು ಕೊಟ್ಟಿದ್ದರು. ಖರ್ಜೂರಕ್ಕೆ ಕಾರು ಒಲಿದು ಬಂದಿದೆ. ಮತ್ತೆ ಕುಮಾರಸ್ವಾಮಿ ಹಾಗೂ ಜಮೀರ್ ಅಹ್ಮದ್ ಗುರು-ಶಿಷ್ಯರು ಕುಚುಕುಗಳಾಗಿದ್ದಾರೆ ಎಂದು ಕಾಂಗ್ರೆಸ್, ಜೆಡಿಎಸ್  ನಾಯಕರಲ್ಲಿ ಚರ್ಚೆ ನಡೆಯುತ್ತಿದೆ. 

ವೈಯಕ್ತಿಕವಾಗಿಯೂ ಟೀಕಿಸಿದ್ದ ಜಮೀರ್ ಅಹ್ಮದ್ ಅವರಿಗೆ ಸಿದ್ದರಾಮಯ್ಯ ಬಳಸುತ್ತಿದ್ದ ಫಾರ್ಚೂನರ್ ಸರ್ಕಾರಿ ಕಾರು ದೊರಕಿದೆ.  ನನಗೆ ಇನ್ನೋವಾ ಬೇಡ. ಫಾರ್ಚೂನರ್ ಕಾರೇ ಬೇಕೆನ್ನುತ್ತಿದ್ದರು ಸಚಿವರು. ಜಮೀರ್ ಅವರ ಬೇಡಿಕೆಯನ್ನು ಸರ್ಕಾರ ಕೊನೆಗೂ ನೆರವೇರಿಸಿದೆ.

loader