ಬೆಂಗಳೂರು [ಜು.29]: ರಾಜ್ಯದಲ್ಲಿ ರೆಬೆಲ್ ಆಗಿ ಹೋದ 17 ಶಾಸಕರು ಅನರ್ಹರಾಗಿದ್ದಾರೆ. ಇತ್ತ ಬಿಜೆಪಿ ವಿಶ್ವಾಸ ಮತ ಯಾಚನೆಗೆ  ಸಜ್ಜಾಗಿದೆ. 

ಆದರೆ ಇಷ್ಟು ದಿನಗಳ ಕಾಲ ರೆಬೆಲ್ ಶಾಸಕರ ಬೆನ್ನಿಗೆ ನಿಂತಂತೆ ಮಾತನಾಡುತ್ತಿದ್ದ ಬಿಜೆಪಿ ನಾಯಕರು ಈಗ ಕೈ ಎತ್ತಿದಂತಿದೆ.  ಅವರು ಯಾರು ಎಂದೇ ಗೊತ್ತಿಲ್ಲ. ಅವರು ಏನು ಮಾಡುತ್ತಿದ್ದಾರೋ ಎನ್ನುವುದೂ ತಿಳಿದಿಲ್ಲ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ. 

ಚುನಾವಣೆ ಆಹ್ವಾನ ತಿರಸ್ಕರಿಸಿದ ಕೈ ನಾಯಕ ಚೆಲುವರಾಯಸ್ವಾಮಿ

ಅವರನ್ನು ಅನರ್ಹ ಮಾಡಿರುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಅವರು ನಮ್ಮ ಪಕ್ಷಕ್ಕೆ ಬರುವುದಾದರೆ ಮುಂದೆ ನೋಡೋಣ ಎಂದು ಪದ್ಮನಾಭನಗರ ಶಾಸಕ ಅಶೋಕ್ ಹೇಳಿದರು. 

17 ರೆಬೆಲ್ ಶಾಸಕರನ್ನು ಅನರ್ಹ ಮಾಡುತ್ತಿದ್ದಂತೆ ಸ್ಪೀಕರ್ ನಿರ್ಧಾರದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು ಇದೀಗ ಉಲ್ಟಾ ಹೊಡೆದಿದ್ದಾರೆ. ಅವರಿಗೂ ನಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ.