ಬೆಂಗಳೂರು [ಜು.29]:  ರಾಜ್ಯದಲ್ಲಿ ಈಗಾಗಲೇ ಅತೃಪ್ತರಾಗಿ ರಾಜೀನಾಮೆ ನೀಡಿ ತೆರಳಿದ್ದ 17 ಮಂದಿ ಅನರ್ಹರಾಗಿದ್ದಾರೆ. ಈ ಕ್ಷೇತ್ರಗಳಿಗೆ ಶೀಘ್ರವೇ ಉಪ ಚುನಾವಣೆ ನಡೆಯಲಿದ್ದು, ಇದಕ್ಕೆ ತಮ್ಮ ಸ್ಪರ್ಧೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಹೇಳಿದ್ದಾರೆ. 

ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅನರ್ಹರಾಗಿದ್ದು, ಇವರ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ವುಚಾರ ಚರ್ಚೆಯಾಗುತ್ತಿದ್ದು, ಈಗಾಗಲೇ ಆಹ್ವಾನವನ್ನು  ನೀಡಲಾಗಿದೆ.  ಅಲ್ಲಿನವರು ತಮ್ಮನ್ನು ಆಹ್ವಾನಿಸುತ್ತಿದ್ದಾರೆ. ಆದರೆ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

BSY 100 ಪರ್ಸೆಂಟ್ ಗೆಲ್ತಾರೆ, ಅವರಿಗೆ ಶುಭವಾಗಲಿ : ಕಾಂಗ್ರೆಸ್ ನಾಯಕ

ಹಿಂದೆ ನಾಗಮಂಗಲದವರು ತಮ್ಮನ್ನು ತಿರಸ್ಕರಿಸಿದರು ಎಂದು ಇಲ್ಲಿಯವರು ಆಹ್ವಾನ ನೀಡುತ್ತಿರಬಹುದು. ಅದಕ್ಕೆ ತಾವು ಇಲ್ಲಿನ ಜನರಿಗೆ ಋಣಿಯಾಗಿರುತ್ತೇನೆ. ಆದರೆ ತಾವು ಉಪ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿದರು.