ರಜನಿಕಾಂತ್ ಅಳಿಯ, ನಟ ಧನುಷ್ ಜನ್ಮರಹಸ್ಯ ಬಗೆಹರಿಯುವ ಲಕ್ಷಣ ಕಾಣಿಸ್ತಾ ಇದೆ. ಧನುಷ್ ಮೈಮೇಲೆ, ಅವರ ತಂದೆ-ತಾಯಿ ಎಂದು ಹೇಳಿಕೊಳ್ಳುತ್ತಿರುವವರು ಹೇಳಿದಂತೆ ಯಾವುದೇ ಮಚ್ಚೆಗಳಿಲ್ಲ ಎಂದು ವೈದ್ಯರು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.

ಚೆನ್ನೈ(ಮಾ.21): ರಜನಿಕಾಂತ್ ಅಳಿಯ, ನಟ ಧನುಷ್ ಜನ್ಮರಹಸ್ಯ ಬಗೆಹರಿಯುವ ಲಕ್ಷಣ ಕಾಣಿಸ್ತಾ ಇದೆ. ಧನುಷ್ ಮೈಮೇಲೆ, ಅವರ ತಂದೆ-ತಾಯಿ ಎಂದು ಹೇಳಿಕೊಳ್ಳುತ್ತಿರುವವರು ಹೇಳಿದಂತೆ ಯಾವುದೇ ಮಚ್ಚೆಗಳಿಲ್ಲ ಎಂದು ವೈದ್ಯರು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.

ಕುತ್ತಿಗೆಯ ಬಲಭಾಗದಲ್ಲಿ ಧನುಷ್​ಗೆ ಸಣ್ಣದೊಂದು ಹುಟ್ಟುಮಚ್ಚೆ ಇದೆ ಎಂದು ಕದಿರೇಸನ್ ಮತ್ತು ಮೀನಾಕ್ಷಿ ದಂಪತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈ ಹೈಕೋರ್ಟ್​ನ ಮಧುರೈ ಪೀಠ ಧನುಷ್ ಮೈಮೇಲಿನ ಹುಟ್ಟು ಮಚ್ಚೆ ಪರೀಕ್ಷೆಗೆ ಆದೇಶ ನೀಡಿತ್ತು. ರಾಜಾಜಿ ಆಸ್ಪತ್ರೆ ವೈದ್ಯರು ವರದಿಯನ್ನು ವೈದ್ಯರು ಹೈಕೋರ್ಟ್​ಗೆ ಸಲ್ಲಿಸಿದ್ದಾರೆ. ವರದಿಯ ಪ್ರಕಾರ, ಧನುಷ್ ಮೈಮೇಲೆ, ಅದರಲ್ಲೂ ಕುತ್ತಿಗೆ ಬಲಭಾಗದಲ್ಲಿ ಯಾವುದೇ ಹುಟ್ಟುಮಚ್ಚೆಯಿಲ್ಲ. ನೀರು ಮತ್ತು ಸ್ಪಿರಿಟ್​ನ್ನು ಮಾತ್ರ ಬಳಸಿ, ಸೂರ್ಯನ ಬೆಳಕಿನಲ್ಲಿ ಹಾಗೂ ಟಾರ್ಚ್​ ಬೆಳಕಿನಲ್ಲಿ ಪರೀಕ್ಷೆ ನಡೆಸಲಾಗಿದೆ. ಈ ವರದಿಯ ಜೊತೆಯಲ್ಲೇ, ಹುಟ್ಟುಮಚ್ಚೆಯನ್ನು ಈಗಿನ ಲೇಸರ್ ಟೆಕ್ನಾಲಜಿ ಮೂಲಕ, ಗುರುತೂ ಸಿಗದಂತೆ ತೆಗೆಸಬಹುದು ಎಂದು ಕೂಡಾ ಹೇಳಲಾಗಿದೆ. ಅದನ್ನು ಕೂಡಾ ಥರ್ಮಾಸ್ಕೋಪ್​ನಲ್ಲಿ ಪತ್ತೆ ಹಚ್ಚಬಹುದು ಎಂದು ವೈದ್ಯರು ತಿಳಿಸಿದ್ಧಾರೆ. ವರದಿಯನ್ನು ಅಂಗೀಕರಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಮಾರ್ಚ್​ 27ಕ್ಕೆ ಮುಂದೂಡಿದೆ.