ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನಗಳನ್ನು ರದ್ದುಪಡಿಸಿಲ್ಲವೆಂದು ಅಲ್ಲಿನ ಡಿಜಿಪಿ ರವರು ಧೃಡಪಡಿಸಿರುತ್ತಾರೆ. ವದಂತಿಗಳಿಗೆ ಕಿವಿಗೊಡಬಾರದು.— Praveen Sood IPS (@CPBlr) April 22, 2017

ಬೆಂಗಳೂರು (ಏ.22): ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನಗಳನ್ನು ರದ್ದುಪಡಿಸಿದ್ದಾರೆಂಬುವುದು ಕೇವಲ ವದಂತಿಯಾಗಿದೆಯೆಂದು ಪೊಲೀಸರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನಗಳನ್ನು ರದ್ದುಪಡಿಸಿಲ್ಲವೆಂದು ಅಲ್ಲಿನ ಡಿಜಿ ರವರು ಧೃಡಪಡಿಸಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಹೇಳಿದ್ದಾರೆ.

ತಮಿಳು ನಟ ಸತ್ಯರಾಜ್ ಕನ್ನಡಿಗರ ವಿರುದ್ಧ ದ್ವೇಷದ ಮಾತುಗಳಿಗೆ ಕ್ಷಮೆ ಕೇಳಿದ ನಂತರ ತಮಿಳುನಾಡಿನ ಚಿತ್ರಮಂದಿರಗಳಲ್ಲೂ ಕನ್ನಡ ಚಿತ್ರಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿತ್ತು.