ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದಾರೆ.  ನಾನು ಗಂಗಾ ಪುತ್ರ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ನವದೆಹಲಿ (ಫೆ.25): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದಾರೆ. ನಾನು ಗಂಗಾ ಪುತ್ರ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ಮೋದಿಯವರನ್ನು ಪ್ರಶ್ನಿಸಿದ್ದಾರೆ.

Add Asianetnews Kannada as a Preferred SourcegooglePreferred

ಗಂಗಾ ಮಾತೆ ನನ್ನನ್ನು ಕರೆಯುತ್ತಿದ್ದಳು ಎಂದು ಮೋದಿ ಜಿ ಆಗಾಗ ಹೇಳುತ್ತಿದ್ದರು. ಆದರೆ ನಾನು ಬನಾರಸ್ ಗೆ ಹೋದಾಗ,ನನ್ನ ಮಗ ಎಲ್ಲಿ ಹೋಗಿದ್ದಾನೆಂದು ಗಂಗಾ ಮಾತೆ ಹುಡುಕುತ್ತಿರುವುದಾಗಿ ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದರು ಎಂದು ನಿತೀಶ್ ಕುಮಾರ್ ಪಾಟ್ನಾದ ಜೆಡಿಯು ರ್ಯಾಲಿಯಲ್ಲಿ ವ್ಯಂಗ್ಯವಾಡಿದ್ದಾರೆ.

ತಮ್ಮ ಕ್ಷೇತ್ರ ವಾರಣಾಸಿಗೆ ಮೋದಿಗೆ ಭೇಟಿ ನೀಡುವುದು ಕಡಿಮೆ. ಆದರೂ ಗಂಗಾ ಮಾತೆ ನನ್ನನ್ನು ಹುಡುಕುತ್ತಿದ್ದಾಳೆ ಎಂದು ಹೇಗೆ ಹೇಳುತ್ತಾರೆ ಎಂದು ನಿತೀಶ್ ಪ್ರಶ್ನಿಸಿದ್ದಾರೆ.