ಮಹಾಮೈತ್ರಿಯನ್ನು ತೊರೆದು ಬಿಜೆಪಿ ಕೈಹಿಡಿದಿರುವ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿರುವ ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಸರ್ಕಾರ ರಚಿಸಲು ರಾಜ್ಯಪಾಲರು ಜೆಡಿಯುಗೆ ಆಹ್ವಾನಿಸಿರುವ ಕ್ರಮವನ್ನು ಸುಪ್ರೀಂ ಕೋರ್ಟ್'ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ಪಾಟ್ನಾ: ಮಹಾಮೈತ್ರಿಯನ್ನು ತೊರೆದು ಬಿಜೆಪಿ ಕೈಹಿಡಿದಿರುವ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿರುವ ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಸರ್ಕಾರ ರಚಿಸಲು ರಾಜ್ಯಪಾಲರು ಜೆಡಿಯುಗೆ ಆಹ್ವಾನಿಸಿರುವ ಕ್ರಮವನ್ನು ಸುಪ್ರೀಂ ಕೋರ್ಟ್'ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚನೆಗೆ ಆರ್'ಜೆಡಿವನ್ನು ಆಹ್ವಾನಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರ ನಿರ್ಧಾರವನ್ನು ನಾವು ಸುಪ್ರೀಂ ಕೋರ್ಟ್'ನಲ್ಲಿ ಪ್ರಶ್ನಿಸುವೆವು. ಆ ನಿಟ್ಟಿಲ್ಲಿ ನಾವು ಕಾನೂನು ಸಲಹೆಯನ್ನು ಪಡೆದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಲಾಲೂ ತಮ್ಮ ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ್ದಾರೆ.
ನಿತೀಶ್ ಕುಮಾರ್'ರನ್ನು ಅವಕಾಶವಾದಿಯೆಂದು ಕರೆದಿರುವ ಲಾಲೂ, ನಿತೀಶ್ ಬಿಹಾರದ ಜನತೆಗೆ ದ್ರೋಹ ಬಗೆದಿದ್ದಾರೆ, ಹಾಗೂ ಅಧಿಕಾರಕ್ಕಾಗಿ ಬಿಜೆಪಿ ಜತೆ ಕೈಜೋಡಿಸಿದ್ದಾರೆಂದು ಹೇಳಿ ಟೀಕಿಸಿದ್ದಾರೆ.
