ನಿಫಾ ವೈರಸ್'ಗೆ 10 ಬಲಿ : ಕರ್ನಾಟಕದಲ್ಲಿ ಕಟ್ಟೆಚ್ಚರ

Nipah virus confirmed kerala five dead and nine critical
Highlights

ಬಾವಲಿ ಹಾಗೂ ಹಂದಿಯಿಂದ ನಿಫಾ ವೈರಸ್ ಹರಡಲಿದ್ದು ಆರಂಭದಲ್ಲಿ ತಲೆ ನೋವು ಹಾಗೂ ಜ್ವರದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕರಾವಳಿಯ ಪ್ರದೇಶದಲ್ಲಿ ಆವರಿಸುವ ಕಾರಣ ಹೆಚ್ಚು ಮುಂಜಾಗ್ರತೆ ವಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.

ಕಲ್ಲಿಕೋಟೆ/ಬೆಂಗಳೂರು(ಮೇ.21): ಭಾರತಕ್ಕೆ ಆವರಿಸಿರುವ ನಿಫಾ ವೈರಸ್'ಗೆ ಈಗಾಗಲೇ 10 ಮಂದಿ ಮೃತಪಟ್ಟಿದ್ದು 5ಕ್ಕೂ ಹೆಚ್ಚು ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಸೋಂಕು ಹರಡುವ ಭೀತಿಯಿಂದ ಕರ್ನಾಟಕದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದ ಕಲ್ಲಿಕೋಟೆ ಜಿಲ್ಲೆಯ ಚಾಂಗ್ರೋತ್ ಗ್ರಾಮದಲ್ಲಿ ಕಳೆದ ವಾರ ಒಂದೇ ಗ್ರಾಮದ ಮೂವರು ಮೃತಪಟ್ಟಿದ್ದರು. ನಾಲ್ಕು ದಿನಗಳ ಹಿಂದಷ್ಟೆ ನಾಲ್ವರು ನಿಫಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇರಳ ಆರೋಗ್ಯ ಸೇವಾ ನಿರ್ದೇಶಕ ಸ್ಪಷ್ಟಪಡಿಸಿದ್ದಾರೆ. 
ಬಾವಲಿ, ಹಂದಿಯಿಂದ ಹರಡುವ ವೈರಸ್
ಬಾವಲಿ ಹಾಗೂ ಹಂದಿಯಿಂದ ನಿಫಾ ವೈರಸ್ ಹರಡಲಿದ್ದು ಆರಂಭದಲ್ಲಿ ತಲೆ ನೋವು ಹಾಗೂ ಜ್ವರದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕರಾವಳಿಯ ಪ್ರದೇಶದಲ್ಲಿ ಆವರಿಸುವ ಕಾರಣ ಹೆಚ್ಚು ಮುಂಜಾಗ್ರತೆ ವಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.
ನಿಫಾ ವೈರಸ್ ಮೊದಲ ಬಾರಿಗೆ 1998ರಲ್ಲಿ  ಮಲೇಶಿಯಾದಲ್ಲಿ ಪತ್ತೆಯಾಗಿತ್ತು. ಆಗ 100ಕ್ಕೂ ಹೆಚ್ಚು ಮಂದಿ ಈ ಸೋಂಕಿನಿಂದ ಸಾವನಪ್ಪಿದ್ದರು. 2001ರಲ್ಲಿ ಭಾರತದ ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡಿದ್ದರೆ  2004ರಲ್ಲಿ ಬಾಂಗ್ಲಾದೇಶದಲ್ಲಿ ಉಲ್ಬಣಿಸಿತ್ತು.
ಲಕ್ಷಣಗಳು

  1. ಆರಂಭದಲ್ಲಿ 5ರಿಂದ 14 ದಿನಗಳವರೆಗೆ ಕಾಣಿಸಿಕೊಳ್ಳುತ್ತದೆ
  2. ತಲೆ ನೋವು, ಜ್ವರ,ಮೂರ್ಛೆ, ವಾಕರಿಕೆ,ಕೆಲವು ಸಂದರ್ಭದಲ್ಲಿ ಉಸಿರು ಕಟ್ಟುವುದು, ಹೊಟ್ಟೆ ನೋವು, ವಾಂತಿ, ಆಯಾಸ, ದೃಷ್ಟಿ ಮಂಜು ಮುಂತಾದ  ಲಕ್ಷಣಗಳಲ್ಲಿ ಕಂಡು ಬರುತ್ತದೆ.
  3. ತಾಳೆ ಮರದಲ್ಲಿ ಬಳಿ ತೆರೆದ ಧಾರಕಗಳಲ್ಲಿ ಕುದಿಸಿರುವ ಪಾನೀಯವನ್ನು  ಕುಡಿಯಬೇಡಿ
  4. ಬಟ್ಟೆ, ಪಾತ್ರೆಗಳು, ಶೌಚಾಲಯ ಬಳಸಿದ ನಂತರ ಸ್ವಚ್ಛವಾಗಿ ಕೈತೊಳೆದುಕೊಳ್ಳಿ.
  5. ಮೇಲಿನ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಚಿಕಿತ್ಸಾ ಕೇಂದ್ರವನ್ನು ಸಂಪರ್ಕಿಸಿ
loader