ಶಬ್ದಮಾಲಿನ್ಯಕ್ಕೆ ಸಂಬಂಧಿಸಿದಂತೆ 21 ತಿಂಗಳ ಮಗು ಸಲ್ಲಿಸಿದ್ದ ಅರ್ಜಿಯನ್ನು ಹಸಿರು ನ್ಯಾಯಾಧೀಕರಣ ಪೀಠವು ವಿಚಾರಣೆ ನಡೆಸಲು ನಿರಾಕರಿಸಿದ ಘಟನೆ ನಡೆದಿದೆ.
ನವದೆಹಲಿ : ಶಬ್ದಮಾಲಿನ್ಯಕ್ಕೆ ಸಂಬಂಧಿಸಿದಂತೆ 21 ತಿಂಗಳ ಮಗು ಸಲ್ಲಿಸಿದ್ದ ಅರ್ಜಿಯನ್ನು ಹಸಿರು ನ್ಯಾಯಾಧೀಕರಣ ಪೀಠವು ವಿಚಾರಣೆ ನಡೆಸಲು ನಿರಾಕರಿಸಿದ ಘಟನೆ ನಡೆದಿದೆ.
ಉತ್ತರ ದೆಹಲಿಯ ಅಶೋಕ್ ವಿಹಾರದಲ್ಲಿರುವ ಶಾಲೆಯೊಂದರಿಂದ ಶಬ್ದ ಮಾಲಿನ್ಯವಾಗುತ್ತಿದೆ, ಟ್ರಾಫಿಕ್ ಜಾಮ್ ಆಗುತ್ತದೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಪ್ರಾಣಾಪಾಯವಿದೆಯೆಂದು 21 ತಿಂಗಳು ಪ್ರಾಯದ ಬೇಬಿ ಅರ್ಶಿತ ಖಾತ್ರಿ, ಆಕೆಯ ತಾಯಿ ಹಾಗೂ ಅಜ್ಜಿ ಸಲ್ಲಿಸಿದ್ದ ಅರ್ಜಿಯನ್ನು ಹಸಿರು ನ್ಯಾಯಾಧೀರಣವು ತಿರಸ್ಕರಿಸಿದೆ.
ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಸಾಬೀತು ಪಡಿಸಲು ಶಾಲೆಯ ಘಂಟೆ ಅಥವಾ ಧ್ವನಿವರ್ಧಕಗಳು ಶಬ್ದ ಮಾಲಿನ್ಯಕ್ಕೆ ಕಾರಣವಾಗಿದೆಯೆಂದು ಹೇಳಿದರೆ ಸಾಲದು, ಎಂದು ಪೀಠ ಅಭಿಪ್ರಾಯಪಟ್ಟಿದೆ.
ಶಾಲೆಗೆ ಬರುವ ವಾಹನಗಳಿಂದ ವಾಯುಮಾಲಿನ್ಯವಾಗುತ್ತಿದೆ ಹಾಗೂ ಅವುಗಳ ಹೊಗೆಯಿಂದ ಸ್ಥಳೀಯ ನಿವಾಸಿಗಳು ಕಾಯಿಲೆಗೊಳಗಾಗುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದ್ದರು.
ಆದರೆ ಅದಕ್ಕೆ ಯಾವುದೇ ಪುರಾವೆಗಳಿಲ್ಲದ ಹಿನ್ನೆಲೆಯಲ್ಲಿ ಹಸಿರು ಪೀಠವು ಆ ವಾದವನ್ನು ಅಲ್ಲಗಳೆದಿದೆ.
