ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಿಸೇಲ್ ಆಧಾರಿತ ನಾಲ್ಕು ಚಕ್ರ ವಾಹನಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಿ ಎಂದು ರಾಷ್ಟ್ರೀಯ ಹಸಿರು ಪ್ರಾಧಿಕಾರ ದೆಹಲಿ ಸರ್ಕಾರ ಹಾಗೂ ಪೋಲಿಸರಿಗೆ ನಿರ್ದೇಶಿಸಿದೆ.
ನವದೆಹಲಿ (ನ.28): ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಿಸೇಲ್ ಆಧಾರಿತ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಿ ಎಂದು ರಾಷ್ಟ್ರೀಯ ಹಸಿರು ಪ್ರಾಧಿಕಾರ ದೆಹಲಿ ಸರ್ಕಾರ ಹಾಗೂ ಪೋಲಿಸರಿಗೆ ನಿರ್ದೇಶಿಸಿದೆ.
ಸ್ವಾಧೀನಕ್ಕೆ ತೆಗೆದುಕೊಂಡ ವಾಹನಗಳನ್ನು ವಿಲೇವಾರಿ ಮಾಡಲು ಭೂಮಿಯನ್ನು ಗುರುತಿಸಲು ನೆರೆ ರಾಜ್ಯಗಳೊಡನೆ ಮಾತುಕತೆ ನಡೆಸುವಂತೆ ಆಮ್ ಆದ್ಮಿ ಪಕ್ಷಕ್ಕೆ ಪೀಠವು ಸೂಚನೆ ನಿಡಿದೆ.
ವಾಹನ ವಿಲೇವಾರಿ ಉದ್ದೇಶಕ್ಕಾಗಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಎರಡು ಸ್ಥಳಗಳನ್ನು ಸಲಹೆ ಮಾಡಿದೆ.
ಈಗಾಗಲೇ ಹತ್ತು ವರ್ಷಗಳಿಗಿಂತ ಹಳೆಯ ಡಿಸೆಲ್ ವಾಹನಗಳನ್ನು ನಿಷೇಧಿಸುವಂತೆ ದೆಹಲಿ ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿತ್ತು. ಆದರೆ ಇದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಈಗಲೂ ರಸ್ತೆಗಳಲ್ಲಿ ಅಂತಹ ವಾಹನಗಳು ಅಲ್ಲಲ್ಲಿ ಕಾಣಸಿಗುತ್ತಿದ್ದು, ಟ್ರಾಫಿಕ್ ಪೋಲಿಸರು ಏನೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಹೇಳಿದೆ.
