ಸಂಭ್ರಮಾಚರಣೆ ಮಿತಿಯಲ್ಲಿದೆ ಒಳಿತು. ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಬಿಡಿಸಿಹೇಳಬೇಕಾಗಿಲ್ಲ. ಇದೀಗ ಗೋವಾದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ತೆರರಳಿದ್ದ ಬೆಂಗಳೂರಿನ ಪ್ರವಾಸಿ ಸಾವನ್ನಪ್ಪಿದ ಘಟನೆ ನಡೆದಿದೆ. ಇಲ್ಲಿದೆ ಘಟನೆ ಸಂಪೂರ್ಣ ವಿವರ.
ವಾಸ್ಕೊ(ಜ.01): ಹೊಸ ವರ್ಷದ ಸಂಭ್ರಮಾಚರಣೆಗೆ ಬಹುತೇಕರ ಸ್ಫಾಟ್ ಗೋವಾ. ಪ್ರವಾಸಿಗರನ್ನ ಕೈಬೀಸಿ ಕರೆಯುವ ಗೋವಾ ಬೀಚ್‌ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ತುಸು ಹೆಚ್ಚೆ ಇರುತ್ತೆ. ಹೀಗೆ ಗೋವಾದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ತೆರಳಿದ ಬೆಂಗಳೂರಿನ ಪ್ರವಾಸಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ಕಾರು ಗುದ್ದಿ ಬೈಕ್ ಸವಾರ ಸಾವು
ಬೆಂಗಳೂರಿನ ರವಿಕುಮಾರ ಧನಂಜಯ ಪೂಜಾರಿ(29) ಸಾವನ್ನಪ್ಪಿದ ದುರ್ದೈವಿ. ನಾಲ್ವರು ಮಿತ್ರರೊಂದಿಗೆ ಹೊಸ ವರ್ಷ ಸಂಭ್ರಮಾಚರಣೆಗಾಗಿ ಗೋವಾದ ವಾಸ್ಕೊಕ್ಕೆ ತೆರಳಿದ್ದರು. ಬೋಗಮಾಳೊ ಬೀಚ್‍ನಲ್ಲಿ ಈಜಲು ಹೋದ ರವಿಕುಮಾರ ಅಲೆಗೆ ಕೊಚ್ಚಿ ಹೋಗಿದ್ದಾರೆ. ತಕ್ಷಣವೇ ಸ್ಥಳೀಯರ ಸಹಾಯದಿಂದ ರವಿಕುಮಾರ ಅವರನ್ನ ರಕ್ಷಿಸಲಾಯಿತು.
ಇದನ್ನೂ ಓದಿ: 10 ಲಕ್ಷ ಮೌಲ್ಯದ ರಾಜ್ಯದ ಮೀನು ಗೋವಾದಲ್ಲಿ ಕಸ!
ಅಲೆಯ ರಭಸ ಹಾಗೂ ನೀರಿನಿಂದ ತೀವ್ರ ಅಸ್ವಸ್ಥನಾಗಿದ್ದ ರವಿಕುಮಾರನನ್ನ ತಕ್ಷಣವೇ ಸ್ಥಳೀಯ ಚಿಕಲಿಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ರವಿಕುಮಾರ ಕೊನೆಯುಸಿರೆಳಿದ್ದಾರೆ. ವಾಸ್ಕೊ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
