ಕೊಪ್ಪಳ(ಅ.01): ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಅನಂತಸಾಗರ ಠಾಣೆಯ ಪಿ.ಎಸ್. ಐ ಸಂಗಮೇಶ ಪ್ರೇಮ ಪ್ರಸಂಗಕ್ಕೆ ಹೊಸ ಟ್ವಿಸ್ಟ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲಬುರಗಿ ಜಿಲ್ಲೆ ಜೇವರ್ಗಿಯ ಮೊಹಮ್ಮದ್ ಸಲಿಂ ಎನ್ನುವವರು ಪಿ.ಎಸ್.ಐ ಸಂಗಮೇಶ ತನ್ನ ಹೆಂಡತಿಯ ಜೊತೆ ಸಂಭಂಧ ಹೊಂದಿದ್ದಾರೆ ಎಂದು ಕೊಪ್ಪಳದಲ್ಲಿ ಆರೋಪಿಸಿದ್ದರು. ಆದರೆ ಆತ ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದ ಜೇವರ್ಗಿಯ ಮಹಿಳೆ ಸಾಹಿರಾ ಬೇಗಂ, ಕಲಬುರಗಿಯಲ್ಲಿ ಆತನ ವಿರುದ್ಧವೇ ದೂರು ಕೊಟ್ಟಿದ್ದಾಳೆ.

ಸಲೀಂಗೂ ನನಗೂ ಈಗ ಯಾವುದೇ ಸಂಭಂಧವಿಲ್ಲ. 12 ವರ್ಷದ ಹಿಂದೆಯೇ ನನಗೆ ಸಲಿಂ ತಲಾಖ್ ಕೊಟ್ಟಿದ್ದಾನೆ. ಧರ್ಮದ ಮುಖಂಡರು ಇದನ್ನು ಅಂಗೀಕರಿಸಿದ್ದಾರೆ. ಆದರೂ ನನ್ನ ಮಾನ ಹಾನಿ ಮಾಡುತ್ತಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಅಂತ ಸಾಹಿರಾ ಬೇಗಂ ಜೇವರ್ಗಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾಳೆ. ಅಲ್ಲದೇ ನನಗೂ ಪಿ.ಎಸ್.ಐ ಸಂಗಮೇಶಗೂ ಯಾವುದೇ ರೀತಿ ಸಂಭಂಧವಿಲ್ಲ. ಸಲೀಂ ನನ್ನ ಮಾನ ಹಾನಿ ಮಾಡಲು ಹಾಗೂ ಬೆದರಿಕೆ ಒಡ್ಡುವ ಮೂಲಕ ಹಣ ವಸೂಲಿ ಮಾಡಲು ಈ ರೀತಿ ಸುಳ್ಳು ಕಥೆ ಕಟ್ಟಿದ್ದಾನೆ ಎಂದು ಸಾಹಿರಾ ಬೇಗಂ ದೂರಿದ್ದಾರೆ.

ಈ ಕುರಿತು ಕಲಬುರಗಿ ಎಸ್ಪಿ ಶಶಿಕುಮಾರ ಅವರಿಗೂ ದೂರು ನೀಡಿರುವ ಸಾಹಿರಾಬಾನು, ನನಗೆ ಸಲೀಂನಿಂದ ರಕ್ಷಣೆ ಕೊಡಿ. ಸುಳ್ಳು ಸುದ್ದಿ ಹಬ್ಬಿಸಿ ನನ್ನ ಮಾನ ಹಾನಿ ಮಾಡುತಿರುವ ಸಲೀಂ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಎಸ್ಪಿ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.