15 ವರ್ಷ ಸಂಸದರಾಗಿದ್ದ ಪ್ರಹ್ಲಾದ ಜೋಶಿ ಅವರಿಗೆ ದಿಲ್ಲಿ ಕೆಲಸ ಮುಗಿದ ತಕ್ಷಣ ಹುಬ್ಬಳ್ಳಿಗೆ ಹೋಗುವ ಧಾವಂತ. ಕ್ಷೇತ್ರದಿಂದ ದೂರ ಇರೋದು ಸ್ವಲ್ಪ ಕಷ್ಟ. ಆದರೆ ಸಚಿವರಾದ ನಂತರ ಮಾತ್ರ, ಅದೂ ಸಂಸದೀಯ ಇಲಾಖೆ ಸಿಕ್ಕ ಮೇಲೆ ವಾರಕ್ಕೆ 5 ದಿನ ದಿಲ್ಲಿಯಲ್ಲೇ ಇದ್ದು, ಅಧಿವೇಶನ ತಯಾರಿ ನಡೆಸುವುದು ಅನಿವಾರ್ಯ.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಟೋಪಿ ಹಾಕೋದ್ರ ಹಿಂದಿದೆ ಈ ರಹಸ್ಯ!

ಜೋಶಿ ಅವರಿಗೆ ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇಲ್ಲ. ಹೀಗಾಗಿ ಒಂದು ರೀತಿ ಸವಾಲು ಕೂಡ ಹೌದು. ಹೋದ ಬುಧವಾರ ಎಲ್ಲ ಕೆಲಸ ಮುಗಿಸಿ ಅಮಿತ್‌ ಶಾ ಮನೆಗೆ ಹೋದಾಗ ಗೃಹ ಸಚಿವರು, ‘ಪ್ರಹ್ಲಾದ್‌, ಯಹಿ ರುಕೋ ಔರ್‌ ವಿಪಕ್ಷ ಕೆ ನೇತಾ ಓ ಸೆ ಮಿಲನಾ ಹೈ’ ಎಂದರಂತೆ. ಕೊನೆಗೆ ಮುಂದಕ್ಕೆ ಹಾಕಿ ಹಾಕಿ ಜೋಶಿ ಹುಬ್ಬಳ್ಳಿಗೆ ಹೋಗಿದ್ದು ಶನಿವಾರ.

ರಾಜ್ಯಸಭೆಯಿಂದ ಬರುವ ನಿರ್ಮಲಾ, ಧರ್ಮೇಂದ್ರ, ಪಿಯುಷ್‌ ಇವರಿಗೆಲ್ಲ ದಿಲ್ಲಿಯೇ ಮನೆ. ಆದರೆ ಲೋಕಸಭೆಯಿಂದ ಬಂದು ಸಚಿವರಾಗುವವರಿಗೆ ಕ್ಷೇತ್ರದಲ್ಲಿ ಮುಖ ತೋರಿಸದಿದ್ದರೆ ಜನ ಏನಂತಾರೋ ಏನೋ ಎಂಬ ಕಾಯಂ ಭಯ. 

ಅಮಿತ್‌ ಶಾ ಕೆಲಸದ ಶೈಲಿಗೆ ಅಧಿಕಾರಿಗಳಲ್ಲಿ ನಡುಕ!

ಜಯಶಂಕರ ಮತ್ತು ಅಜಿತ್‌ ದೋವಲ್

ಮೋದಿ ಅವರ ಮೊದಲ 5 ವರ್ಷ ಅಜಿತ್‌ ದೋವಲ್ ತೆಗೆದುಕೊಳ್ಳುವ ಅನೌಪಚಾರಿಕ ಸಭೆಗಳಿಗೆ ಎಸ್‌. ಜೈಶಂಕರ್‌ ಹೋಗಿ ಕುಳಿತುಕೊಳ್ಳುತ್ತಿದ್ದರು. ಇದಕ್ಕೆ ಮೋದಿ ನಿರ್ದೇಶನವೂ ಇರುತ್ತಿತ್ತು. ಆದರೆ ಈಗ, ಜೈಶಂಕರ ಕ್ಯಾಬಿನೆಟ್‌ ಮಂತ್ರಿ ಆದ ತಕ್ಷಣ, ತಮ್ಮ ಪರಮಾಪ್ತ ಭದ್ರತಾ ರಣ ವ್ಯೂಹಕಾರ ಅಜಿತ್‌ ದೋವಲ್ ಅವರಿಗೆ ಕ್ಯಾಬಿನೆಟ್‌ ದರ್ಜೆಗೆ ಬಡ್ತಿ ದೊರೆತಿದೆ.

ಆದರೆ ಮೊದಲಿನ ಹಾಗೆ ದೋವಲ್ಗೆ ಆಂತರಿಕ ಸುರಕ್ಷೆ ಎಂದು ಗೃಹಇಲಾಖೆಯಲ್ಲಿ ಕೈ ಹಾಕಲು ಸಾಧ್ಯ ಆಗೋಲ್ಲ. ಏಕೆಂದರೆ ಅಮಿತ್‌ ಶಾ ಅದನ್ನು ಇಷ್ಟಪಡಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ