ದಿಲ್ಲಿಗೆ ಜಾಸ್ತಿ ಬರುತ್ತಿರುವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಪತ್ರಕರ್ತರನ್ನು ಭೇಟಿಯಾಗಿ, ‘ನನ್ನನ್ನು ಸ್ವಲ್ಪ ಮಾತನಾಡಿಸಿ ಗುರುಗಳೇ ಒಳ್ಳೆ ಬೈಟ್‌ ಕೊಡುತ್ತೀನಿ’ ಎಂದು ಕೇಳುತ್ತಿರುತ್ತಾರೆ.

ಅಮಿತ್‌ ಶಾ ಕೆಲಸದ ಶೈಲಿಗೆ ಅಧಿಕಾರಿಗಳಲ್ಲಿ ನಡುಕ! 

ಆದರೆ ಸ್ಟೋರಿ ಅದಲ್ಲ, ನಿಮ್ಮ ಟೊಪ್ಪಿಗೆ ರಹಸ್ಯ ಏನು ಎಂದು ಪತ್ರಕರ್ತರು ಕೇಳಿದಾಗ ಕಟ್ಟಾಹೇಳಿದ್ದು ಇಷ್ಟು; 1991 ರಲ್ಲಿ ಒಮ್ಮೆ ತಿರುಪತಿಗೆ ಹೋಗಿ ಕಟ್ಟಾಪ್ರಸಾದ ಕೊಡಲು ಯಡಿಯೂರಪ್ಪ ಮತ್ತು ಅನಂತ ಕುಮಾರ್‌ರನ್ನು ಕಾಣಲು ಹೋಗಿದ್ದರಂತೆ.

ಆಗ ಕಟ್ಟಾ ಬೆಂಗಳೂರು ಕಾರ್ಪೊರೇಟರ್‌. ಕಟ್ಟಾಬೋಳು ತಲೆ ನೋಡಿದ ಅನಂತ ಕುಮಾರ್‌, ‘ಅವೆನ್ಯೂ ರಸ್ತೆಗೆ ಹೋಗಿ ಒಂದು ಟೋಪಿ ಖರೀದಿ ಮಾಡು, ಅದನ್ನು ಕಾಯಂ ಉಪಯೋಗಿಸು. ಆಗ ಜನ, ಕಾರ್ಯಕರ್ತರು, ನಾಯಕರು ನಿನ್ನ ಟೋಪಿಯಿಂದಲಾದರೂ ಗುರುತು ಹಿಡಿಯುತ್ತಾರೆ’ ಎಂದರಂತೆ. 

ಮೋದಿ ಜನಪ್ರಿಯತೆ ಕಾಪಾಡಿಕೊಳ್ಳುವ ಫಾರ್ಮುಲಾ ಇದು!

ಆಗಿನಿಂದ ಕಟ್ಟಾತಲೆ ಮೇಲೆ ಅದೇ ಟೋಪಿ ಇದೆ. ದಿಲ್ಲಿಯಲ್ಲಿ ಅನೇಕರು ಕಟ್ಟಾಎಂದು ಕರೆಯದೆ ಕೈಸಾ ಹೈ ಟೋಪಿ ಎನ್ನುತ್ತಾರಂತೆ. ಎಲ್ಲಾ ಟೋಪಿ ಗಳಿಗೂ ಒಂದು ಕಥೆ ಇರುತ್ತದೆ ನೋಡಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ