ಸಿಂಥೆಟಿಕ್ ಡೈಮಂಡ್‌ಗಳು ಎಂದು ಕರೆಯಲಾಗುವ ಅವುಗಳು ನೈಜ ವಜ್ರಗಳಿಂದ ಹೆಚ್ಚು ಕಠಿಣವಾಗಿರುತ್ತವೆ.
ಬೆಲೆಬಾಳುವ ವಜ್ರಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವುಗಳನ್ನು ಕೂಡ ಈಗ ಕೃತಕವಾಗಿ ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂಬುದನ್ನು ಆಸ್ಟ್ರೇಲಿಯಾದ ನ್ಯಾಷನಲ್ ಯುನಿವರ್ಸಿಟಿ ವಿಜ್ಞಾನಿಗಳು ಸಾಸಿ ತೋರಿಸಿದ್ದಾರೆ. ಸಿಂಥೆಟಿಕ್ ಡೈಮಂಡ್ಗಳು ಎಂದು ಕರೆಯಲಾಗುವ ಅವುಗಳು ನೈಜ ವಜ್ರಗಳಿಂದ ಹೆಚ್ಚು ಕಠಿಣವಾಗಿರುತ್ತವೆ. ಲಾನ್ಸ್ಡಲೈಟ್ ಎಂದು ಕರೆಯಲಾಗುವ ಈ ಸಿಂಥೆಟಿಕ್ ವಜ್ರವನ್ನು 400 ಡಿಗ್ರಿ ಸೆಲ್ಶಿಯಸ್ ಉಷ್ಣತೆಯಲ್ಲಿ ಸಿದ್ಧಪಡಿಸಲಾಗಿದೆ. ಪ್ರಯೋಗಶಾಲೆಯಲ್ಲಿಯೇ ಅಂಥ ವಾತಾವರಣ ನಿರ್ಮಿಸಲಾಗಿದೆ ಎಂದಿದ್ದಾರೆ ಸಂಶೋಧಕರು.
