2000, 500, 200, 50 ರು. ಬಳಿಕ ಇದೀಗ 10 ರು. ಹೊಸ ನೋಟು ಬರಲಿದೆ. ಚಾಕೊಲೇಟ್ ಬಣ್ಣದಲ್ಲಿರುವ ಈ ನೋಟಿನಲ್ಲಿ ಕೊನಾರ್ಕ್ ಸೂರ್ಯ ಮಂದಿರದ ಚಿತ್ರವಿರಲಿದೆ.

ಮುಂಬೈ(ಜ.5): 2000, 500, 200, 50 ರು. ಬಳಿಕ ಇದೀಗ 10 ರು. ಹೊಸ ನೋಟು ಬರಲಿದೆ. ಚಾಕೊಲೇಟ್ ಬಣ್ಣದಲ್ಲಿರುವ ಈ ನೋಟಿನಲ್ಲಿ ಕೊನಾರ್ಕ್ ಸೂರ್ಯ ಮಂದಿರದ ಚಿತ್ರವಿರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ವಾರವೇ ಹೊಸ ವಿನ್ಯಾಸದ ನೋಟಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. 2005ರಲ್ಲಿ 10. ರು ಮೌಲ್ಯದ ಹೊಸ ನೋಟು ಬಂದ ನಂತರ, ಇದರಲ್ಲಿ ಇನ್ಯಾವ ಬದಲಾವಣೆಯೂ ಆಗಿಲ್ಲ. ಆದರೆ ಹೊಸ ನೋಟು ಬಂದ ನಂತರ ಹಳೆಯ ನೋಟುಗಳೂ ಚಲಾವಣೆಯಲ್ಲಿ ಮುಂದುವರಿಯಲಿವೆ. ಕಳೆದ ವರ್ಷದ ಆಗಸ್ಟ್’ನಲ್ಲಿ ರಿಸರ್ವ್ ಬ್ಯಾಂಕ್ ಹೊಸ 50 ರೂ. ಹಾಗೂ 200 ರು. ನೋಟು ಬಿಡುಗಡೆ ಮಾಡಿತ್ತು.