ಸರಕಾರದ ವಿವಿಧ ಕಾರ್ಯಕ್ರಮಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಸರಕಾರ ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ವಿಶೇಷ ಸಂಖ್ಯೆಯುಳ್ಳ ಆಧಾರ್ ಕಾರ್ಡ್‌ಗಳನ್ನು ಇನ್ನು ಮುಂದೆ ಹುಟ್ಟಿದ ಮಗುವಿಗೂ ನೀಡಲು ವಿಶಿಷ್ಟ ಗುರುತಿನ ಪ್ರಾಧಿಕಾರ ನಿರ್ಧರಿಸಿದ್ದು, ಜನನ ಪ್ರಮಾಣ ಪತ್ರದೊಂದಿಗೆ, ಮಗುವಿನ ಆಧಾರ್ ಕಾರ್ಡ್‌ಗೆ ಸಹ ಆಸ್ಪತ್ರೆಯಲ್ಲಿಯೇ ಅರ್ಜಿ ಸಲ್ಲಿಸಬಹುದು.
ಬೆಂಗಳೂರು: ಸರಕಾರದ ವಿವಿಧ ಕಾರ್ಯಕ್ರಮಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಸರಕಾರ ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ವಿಶೇಷ ಸಂಖ್ಯೆಯುಳ್ಳ ಆಧಾರ್ ಕಾರ್ಡ್‌ಗಳನ್ನು ಇನ್ನು ಮುಂದೆ ಹುಟ್ಟಿದ ಮಗುವಿಗೂ ನೀಡಲು ವಿಶಿಷ್ಟ ಗುರುತಿನ ಪ್ರಾಧಿಕಾರ ನಿರ್ಧರಿಸಿದ್ದು, ಜನನ ಪ್ರಮಾಣ ಪತ್ರದೊಂದಿಗೆ, ಮಗುವಿನ ಆಧಾರ್ ಕಾರ್ಡ್‌ಗೆ ಸಹ ಆಸ್ಪತ್ರೆಯಲ್ಲಿಯೇ ಅರ್ಜಿ ಸಲ್ಲಿಸಬಹುದು.
ನವಜಾತ ಶಿಶುವಿಗೆ ಆಧಾರ್ ಸಂಖ್ಯೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ದೇಶದ ಬಹುತೇಕ ಆಸ್ಪತ್ರೆಗಳಲ್ಲಿಯೇ ಆರಂಭಿಸಲು ಪ್ರಾಧಿಕಾರ ಮುಂದಾಗಿದೆ. ಈ ಬಗ್ಗೆ ವಿಶಿಷ್ಟ ಗುರುತಿನ ಪ್ರಾಧಿಕಾರ ಟ್ವೀಟ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಲು http://uidai.gov.inಗೆ ಭೇಟಿ ನೀಡುವಂತೆ ಸೂಚಿಸಿದೆ.
ಜನನ ಪ್ರಮಾಣ ಪತ್ರದೊಂದಿಗೆ, ಇನ್ನು ಮುಂದೆ ಪೋಷಕರು ಆಧಾರ್ ಸಂಖ್ಯೆಗೂ ಅರ್ಜಿ ಸಲ್ಲಿಸಬಹುದಾಗಿದ್ದು, ಜೀವಮಾನ ಪೂರ್ತಿ ಅಗತ್ಯವಾದ ಎರಡು ದಾಖಲೆಗಳು ಒಂದೆಡೆ ಸಿಗಲಿದೆ.
