Asianet Suvarna News Asianet Suvarna News

5ನೇ ಬಾರಿ ಇಸ್ರೇಲ್ ಪ್ರಧಾನಿಯಾಗಿ ಆಯ್ಕೆಯಾದ ಬೆಂಜಮಿನ್ ನೆತನ್ಯಾಹು!

ಇಸ್ರೇಲ್ ಸಾರ್ವತಿಕ್ರ ಚುನಾವಣೆ ಫಲಿತಾಂಶ ಘೋಷಣೆ| 5ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಬೆಂಜಮಿನ್ ನೆತನ್ಯಾಹು| ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನೆತನ್ಯಾಹು ಪಕ್ಷ| ನೆತನ್ಯಾಹು ವಿರುದ್ಧ ಸೋಲೋಪ್ಪಿಕೊಂಡ ಪ್ರತಿಸ್ಪರ್ಧಿ ಬೆನ್ನಿ ಗ್ಯಾಂಟ್ಸ್| ನೆತನ್ಯಾಹು ಆಯ್ಕೆಯನ್ನು ಅಸಂಬದ್ಧ ಎಂದ ಹಮಾಸ್ ಸಂಘಟನೆ|

Netanyahu Set For Record Fifth Term As Israel Election Declared
Author
Bengaluru, First Published Apr 11, 2019, 1:14 PM IST

ಜೆರುಸಲೇಂ(ಏ.11): ಇಡೀ ಜಗತ್ತಿನ ಕುತೂಹಲ ಕೆರಳಿಸಿದ್ದ ಇಸ್ರೇಲ್ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜಯಭೇರಿ ಭಾರಿಸಿದ್ದಾರೆ.

ನೆತನ್ಯಾಹು ದಾಖಲೆಯ ಸತತ 5ನೇ ಬಾರಿಗೆ ಅಧಿಕಾರದ ಗದ್ದುಗೆ ಏರಲಿದ್ದು, ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಬೆನ್ನಿ ಗ್ಯಾಂಟ್ಸ್ ಸೋಲೋಪ್ಪಿಕೊಂಡಿದ್ದಾರೆ.

120 ಸದಸ್ಯ ಬಲವುಳ್ಳ ಸದನದಲ್ಲಿ 65 ಸದಸ್ಯ ಬಲದ ಬೆಂಬಲದೊಂದಿಗೆ ನೆತನ್ಯಾಹು ಅಧಿಕಾರದ ಗದ್ದುಗೆ ಏರಲಿದ್ದಾರೆ. ನೆತನ್ಯಾಹು ಅವರಿಗೆ ಬಲಪಂಥೀಯ ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲ ಸಿಗಲಿದೆ.

ಇನ್ನು ಇಸ್ರೇಲ್ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತ್ಯೇಕ ಪ್ಯಾಲೆಸ್ತೇನ್ ಪರ ಸಂಘಟನೆ ಹಮಾಸ್, ನೆತನ್ಯಾಹು ಆಯ್ಕೆಯನ್ನು ಅಸಂಬದ್ಧ ಎಂದು ಹೇಳಿದೆ.

ಇಸ್ರೇಲ್‌ನಲ್ಲಿ ಶಾಂತಿ ಮಾತುಕತೆಯಲ್ಲಿ ನಂಬಿಕೆ ಇರದ ಯಾವುದೇ ಪಕ್ಷ ಅಧಿಕಾರ ರಚನೆ ಮಾಡಿದರೂ ಅದು ಹಾಲಿ ಪರಿಸ್ಥಿತಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹಮಾಸ್ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ19ರವರೆಗೆ ಏಳು ಹಂತಗಳಲ್ಲಿ ಮತದಾನ, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios