Asianet Suvarna News Asianet Suvarna News

ವಿಶ್ವದಾಖಲೆಯ 23 ನೇ ಬಾರಿ ಎವರೆಸ್ಟ್‌ ಏರಿದ ಕಮಿ ರಿತಾ

ವಿಶ್ವದಾಖಲೆಯ 23 ನೇ ಬಾರಿ ಎವರೆಸ್ಟ್‌ ಏರಿದ ಕಮಿ ರಿತಾ | ಯಶಸ್ವಿಯಾಗಿ ವಿಶ್ವದ ಅತಿಎತ್ತರದ ಶಿಖರ ತಲುಪಿದ ಶೆರ್ಪಾ | ಕಳೆದ ವರ್ಷ ತಾವೇ ಸ್ಥಾಪಿಸಿದ್ದ ದಾಖಲೆಯನ್ನು ಮುರಿದಿದ್ದಾರೆ 

Nepal Sherpa climber Kami Rita scales Mount Everest for 23 rd time
Author
Bengaluru, First Published May 16, 2019, 10:31 AM IST

ಕಾಠ್ಮಂಡು (ಮೇ. 16): ನೇಪಾಳದ ಕಮಿ ರಿತಾ 29029 ಅಡಿ ಎತ್ತರದಲ್ಲಿರುವ ಮೌಂಟ್‌ ಎವರೆಸ್ಟ್‌ ಪರ್ವತವನ್ನು ಮಂಗಳವಾರ ದಾಖಲೆಯ 23ನೇ ಬಾರಿಗೆ ಏರಿದ್ದಾರೆ. ಈ ಮೂಲಕ ಕಳೆದ ವರ್ಷ ತಾವೇ ಸ್ಥಾಪಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

ಕಮಿ ರಿತಾ ಸೇರಿದಂತೆ 8 ಜನ ಶೆರ್ಪಾಗಳ ತಂಡ, ಮೌಂಟ್‌ ಎವರೆಸ್ಟ್‌ ಏರಬಯಸುವ ಪರ್ವಾತಾರೋಹಿಗಳಿಗೆ ನೆರವಾಗಲೆಂದು, ಬೇಸ್‌ಕ್ಯಾಂಪ್‌ನಿಂದ್‌ ಹಿಡಿದು ಶಿಖರದ ತುದಿಯವರೆಗೆ ದಾರಿಯನ್ನು ನಿರ್ಮಿಸುವುದರ ಜೊತೆಗೆ ಅಲ್ಲಿಯವರೆಗೆ ಪರ್ವತಾರೋಹಿಗಳಿಗೆ ಬೆಟ್ಟಏರಲು ನೆರವಾಗುವಂತೆ ಹಗ್ಗವನ್ನು ಕಟ್ಟಲು ಹೋಗಿತ್ತು. ಈ ಕೆಲಸವನ್ನು ಮಂಗಳವಾರ ಪೂರ್ಣಗೊಳಿಸುವ ಮೂಲಕ, ತಂಡವು ಯಾತ್ರೆಗೆ ಅನುವು ಮಾಡಿಕೊಟ್ಟಿದೆ.

1994ರಲ್ಲಿ ಮೊದಲ ಬಾರಿಗೆ ಮೌಂಟ್‌ ಎವರೆಸ್ಟ್‌ ಶಿಖರ ಏರಿದ್ದ ಕಮಿ ರಿತಾ (49) ನಂತರ ಪ್ರತಿ ವರ್ಷವೂ, ಹಿಮಪರ್ವತವನ್ನ ಏರುತ್ತಲೇ ಇದ್ದಾರೆ. 2017ರಲ್ಲಿ ಅಪಾ ಶೆರ್ಪಾ ಮತ್ತು ಪುರ್ಬಾ ತಶಿ ಶೆರ್ಪಾ ಮತ್ತು ಕಮಿ ರಿತಾ 21ನೇ ಬಾರಿ ಎವರೆಸ್ಟ್‌ ಏರುವ ಮೂಲಕ ದಾಖಲೆ ನಿರ್ಮಿಸಿದ್ದರು. ಆದರೆ 2018ರಲ್ಲಿ ಕಮಿ ರಿತಾ 22ನೇ ಬಾರಿ ಏರಿ ವಿಶ್ವದಾಖಲೆ ಸ್ಥಾಪಿಸಿದ್ದರು. ಈ ಬಾರಿ ಅವರು ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.

ಎವರೆಸ್ಟ್‌ ಪರ್ವತವನ್ನು ನೇಪಾಳ ಮತ್ತು ಟಿಬೆಟ್‌ ಮಾರ್ಗವಾಗಿ ಏರಬಹುದು. ನೇಪಾಳ ಸರ್ಕಾರ ಈ ವರ್ಷ ಈಗಾಗಲೇ 378 ಜನರಿಗೆ ಪರ್ವತ ಏರಲು ಲೈಸೆನ್ಸ್‌ ನೀಡಿದೆ. ಪ್ರತಿ ಪರ್ವತಾರೋಹಿ ಜೊತೆಗೆ ಒಬ್ಬ ಶೆರ್ಪಾ ಇದ್ದೇ ಇರುತ್ತಾರೆ. ಹೀಗಾಗಿ ನೇಪಾಳದ ಮಾರ್ಗದಲ್ಲಿ 750 ಜನ ಶಿಖರ ಏರುವುದು ಈಗಾಗಲೇ ಖಚಿತಪಟ್ಟಿದೆ. ಇನ್ನು ಟಿಬೆಟ್‌ ಮಾರ್ಗದಲ್ಲೂ ಈಗಾಗಲೇ 140 ಜನ ಹೆಸರು ನೊಂದಾಯಿಸಿಕೊಂಡಿದ್ದಾರೆ. ಹೀಗಾಗಿ ಈ ವರ್ಷ ಹವಾಮಾನ ಚೆನ್ನಾಗಿದ್ದಲ್ಲಿ ದಾಖಲೆ ಪ್ರಮಾಣದ ಜನ ಶಿಖರ ಏರುವುದು ಖಚಿತವಾಗಿದೆ. ಕಳೆದ ವರ್ಷ 807 ಜನ ಶಿಖರ ಏರಿದ್ದರು.

Follow Us:
Download App:
  • android
  • ios