Asianet Suvarna News Asianet Suvarna News

ಮಗಳ ಶವದೊಂದಿಗೆ 3 ದಿನ ಕಳೆದ ತಾಯಿ, ಸತ್ತ ವಿಷಯ ತಿಳಿದೊಡನೆ ಕೊನೆಯುಸಿರೆಳೆದ ಅಮ್ಮ!

ಆಘಾತಕಾರಿ ಘಟನೆಯೊಂದರಲ್ಲಿ  52 ವರ್ಷದ ತಾಯಿಯೊಬ್ಬಳು ತನ್ನ 21 ವರ್ಷದ ಮಗಳ ಶವದೊಂದಿಗೆ ಮೂರು ದಿನ ಕಳೆದ ಘಟನೆ ಪಶ್ಚಿಮ ಬಂಗಾಳದಲ್ಲಿ ಕೋಲ್ಕತ್ತಾದಲ್ಲಿ ನಡೆದಿದೆ. 

A mother trying to wake up her dead daughter and feed her As soon as she heard about daughter death mother also died akb
Author
First Published May 4, 2024, 1:29 PM IST

ಕೋಲ್ಕತ್ತಾ: ಆಘಾತಕಾರಿ ಘಟನೆಯೊಂದರಲ್ಲಿ  52 ವರ್ಷದ ತಾಯಿಯೊಬ್ಬಳು ತನ್ನ 21 ವರ್ಷದ ಮಗಳ ಶವದೊಂದಿಗೆ ಮೂರು ದಿನ ಕಳೆದ ಘಟನೆ ಪಶ್ಚಿಮ ಬಂಗಾಳದಲ್ಲಿ ಕೋಲ್ಕತ್ತಾದಲ್ಲಿ ನಡೆದಿದೆ. ಇನ್ನು ದುರಂತವೆಂದರೆ ಈ 52 ವರ್ಷದ ತಾಯಿ ಮೃತ ಮಗಳಿಗೆ ಊಟ ಮಾಡಿಸಲು ಪ್ರಯತ್ನ ಮಾಡುವ ಜೊತೆ ಮಾತನಾಡಲು ಕೂಡ ಯತ್ನಿಸಿದ ಮನಕಲುಕುವ ಘಟನೆ ನಡೆದಿದೆ. ಕೋಲ್ಕತ್ತಾದ ಬರನಗರದಲ್ಲಿ ನಡೆದಿದೆ. ಗಂಡನಿಂದ ದೂರವಾಗಿದ್ದ ದೇಬಿ ಭೌಮಿಕ ಎಂಬ ಮಹಿಳೆ ತನ್ನ ಮಗಳು ಡೆಬೊಲಿನಾ ಜೊತೆ  ಟಿಎನ್‌ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಲಾಲ್‌ಬರಿ ಅಪಾರ್ಟ್‌ಮೆಂಟ್‌ನಲ್ಲಿ 2006 ರಿಂದಲೂ ವಾಸ ಮಾಡುತ್ತಿದ್ದರು. ಆಕೆಯ ಗಂಡ ದೇಬಾಸಿಸ್ ಭೌಮಿಕ ಬ್ಲಡ್‌ ಬ್ಯಾಂಕ್ ಉದ್ಯೋಗಿಯಾಗಿದ್ದರು. 

ಘಟನೆಗೆ ಸಂಬಂಧಿಸಿದಂತೆ ನೆರೆಮನೆಯಲ್ಲಿ ವಾಸ ಮಾಡುತ್ತಿದ್ದ ಬಿಶ್ವನಾಥ್ ಶಹಾ ಮಾತನಾಡಿದ್ದು,ದೇಬಿ ಭೌಮಿಕ ಅವರ ಪೋಷಕರಿಬ್ಬರೂ ರಾಜ್ಯ ಸರ್ಕಾರಿ ನೌಕರರಾಗಿ ನಿವೃತ್ತರಾಗಿದ್ದರು. ಅವರು 2021ರ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಈ ಅಪ್ಪ ಅಮ್ಮ ಇಬ್ಬರೂ ತೀರಿಕೊಂಡಿದ್ದರು. ದೇಬಿ ಭೌಮಿಕ ಅವರ ಅಪ್ಪ ಅಮ್ಮನ ಸಾವಿನ ನಂತರ ಮನೆಯಲ್ಲಿ ಅಮ್ಮ ಮಗಳು ಇಬ್ಬರೇ ವಾಸ ಮಾಡುತ್ತಿದ್ದರು. ಕೋವಿಡ್ ಸಮಯದುದ್ದಕ್ಕೂ ಈ ಕುಟುಂಬಕ್ಕೆ ನೆರೆಮನೆಯವರು ಹಣಕಾಸಿನ ಸಹಾಯದ ಜೊತೆ ಮಾನಸಿಕ ಬೆಂಬಲ ನೀಡಿ ಈ ಕುಟುಂಬಕ್ಕೆ ಸಹಾಯ ಮಾಡಿದ್ದರು.  ಆದರೆ ಈಗ ದೇಬಿ ಭೌಮಿಕ ಅವರ ಏಕೈಕ ಪುತ್ರಿಯೂ ಸಾವನ್ನಪ್ಪಿದ್ದಾರೆ. 

ಅಯ್ಯೋ ವಿಧಿಯೇ... ಮೃತ ಮಗನ ಶವದೊಂದಿಗೆ 8 ದಿನ ಕಳೆದ ಹಾಸಿಗೆ ಹಿಡಿದಿದ್ದ ತಾಯಿ

ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಮನೆಯವರು ಆಗಮಿಸಿ ಮನೆಯ ಬಾಗಿಲು ತೆರೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.  ಇದಕ್ಕೆ ಸಂಬಂಧಿಸಿದಂತೆ ನೆರೆಮನೆಯ ಅರ್ಚಿತಾ ಮುಖರ್ಜಿ ಪ್ರತಿಕ್ರಿಯಿಸಿದ್ದು,  ದೇವಿಯವರು ಮನೆ ಬಾಗಿಲು ತೆರೆದಾಗ ಅವರ ಮಗಳ ಶವ ಹಾಸಿಗೆಯಲ್ಲಿ ಇರುವುದು ತಿಳಿದು ಬಂದಿದೆ. ಅದು ಬಹುತೇಕ ಕೊಳೆತ ಸ್ಥಿತಿಯಲ್ಲಿ ಇತ್ತು.  ಆದರೆ ಅಮ್ಮ ದೇವಿ ಭೌಮಿಕ ನೆರೆಮನೆಯವರ ಬಳಿ ತನ್ನ ಮಗಳು ಮೂರು ದಿನದಿಂದ ನನ್ನ ಜೊತೆ ಮಾತನಾಡುತ್ತಿಲ್ಲ, ಊಟ ಮಾಡುತ್ತಿಲ್ಲ. ಆಕೆಗಾಗಿ ಊಟ, ದಾಲ್ ಅನ್ನ ತಯಾರಿಸಿ ಹಲವು ಬಾರಿ ಊಟ ಮಾಡುವಂತೆ ಹೇಳಿದರು ಆಕೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ದೇಬಿ ಅವರಿಗೆ ನಿಮ್ಮ ಮಗಳು ಬದುಕಿಲ್ಲ ಎಂಬ ಕಹಿ ಸತ್ಯವನ್ನು ತಿಳಿಸುವ ಪ್ರಯತ್ನವನ್ನು ನೆರೆಮನೆಯವರು ಮಾಡಿದ್ದಾರೆ. ಆದರೆ ಆ ದೇಬಿ ಮಾತ್ರ ತನ್ನ ಮಗಳ ಸಾವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದೇ ಆಕೆ ಇನ್ನೂ ಜೀವಂತವಾಗಿ ಇದ್ದಾಳೆ ಎಂದು ಹೇಳಿದ್ದಾರೆ. 

ಹೀಗಾಗಿ ಬಳಿಕ ಪೋಷಕರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಅಲ್ಲಿಂದ ಎತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಬಹುಶಃ ಮೂರು ದಿನಗಳ ಹಿಂದೆಯೇ ದೇಬಿ ಪುತ್ರಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಆದರೆ ದುರಂತ ಎಂದರೆ ಇದಾಗಿ ಸ್ವಲ್ಪ ಹೊತ್ತಿನಲ್ಲಿ ದೇಬಿ ಕೂಡ ಸಾವನ್ನಪ್ಪಿದ್ದಾರೆ.  ಕುಸಿದು ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರಗೆ ಪೊಲೀಸರು ಕರೆತಂದಿದ್ದಾರೆ. ಆದರೆ ವೈದ್ಯರು ಆಕೆ ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಅವರ ದೇಹವವನ್ನು ಕೂಡ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿದೆ. 

ಮೊಮ್ಮಗನ ಶವದೊಂದಿಗೆ 10 ದಿನ ಕಳೆದ ವೃದ್ಧೆ

ಘಟನೆಗೆ ಸಂಬಂಧಿಸಿದಂತೆ ಬರಾಕ್‌ಪೊರೆ ಕಮೀಷನರೇಟ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ದೇಬಿ ಭೌಮಿಕ ಅವರು ಸ್ಕಿಜೋಪ್ರೇನಿಯಾ ಎಂಬ ಮನೋವ್ಯಾಧಿಯಿಂದ ಬಳಲುತ್ತಿದ್ದರು. ಇನ್ನು ಸ್ಥಳೀಯಾಡಳಿತವೂ ಘಟನೆ ಬಗ್ಗೆ ದೇಬಿಯ ಗಂಡನಿಗೆ ವಿಚಾರ ತಿಳಿಸಿದ್ದು, ಶವವನ್ನು ಪಡೆಯಲು ಅವರು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios