ನಾವೆಲ್ಲ ಜುಲೈ 27 ರ ಬ್ಲಡ್ ಮೂನ್ ಏನಾಗುತ್ತದೆ? ಯಾವ ಗ್ರಹದ ಮೇಲೆ ಯಾವ ಪರಿಣಾಮ ಆಗುತ್ತದೆ? ಯಾರಿಗೆ ಲಾಭ-ಯಾರಿಗೆ ನಷ್ಟ? ರಾಜಕಾರಣದ ಮೇಲೆ ಪರಿಣಾಮ ಏನು? ಎಂಬ ಲೆಕ್ಕಾಚಾರ ಮಾಡುತ್ತಿದ್ದೇವೆ. ಆದರೆ ಇತಿಹಾಸ ಬೆರೆಯದೆ ಕತೆ ಹೇಳುತ್ತಿದೆ. ಏನಪ್ಪಾ ಅಂತೀರಾ..
ವಾಷಿಂಗ್ಟನ್ (ಜು.24) ಚಂದ್ರನ ಮೇಲೆ ಮಾನವ ಪ್ರಥಮ ಸಾರಿ ಕಾಲಿಟ್ಟು ಬಂದು ಇಂದಿಗೆ 49 ವರ್ಷ ಕಳೆದಿದೆ. ಚಂದ್ರನ ಮೇಲೆ ಪ್ರಥಮ ಬಾರಿ ಕಾಲಿಟ್ಟಾಗ ಅಮೆರಿಕದ ನೀಲ್ ಆರ್ಮ್‍ಸ್ಟ್ರಾಂಗ್ ಮತ್ತು ಬುಜ್ ಅಲ್‍ಡ್ರಿನ್ ಗೆ ತಾವು ಮಾಡಿದ ಸಾಧನೆ ಎಂಥಹದು ಎಂಬುದು ಅರಿವಿಗೆ ಬಂದಿರಲಿಲ್ಲವೆನೊ?
ನೀಲ್ ಮತ್ತು ಬುಜ್ ಚಂದ್ರನ ಮೇಲೆ ಕಾಲಿಟ್ಟ ಪ್ರಥಮ ಮಾನವರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. 21 ಗಂಟೆ 5 ನಿಮಿಷಗಳ ಕಾಲ ಅಲ್ಲಿದ್ದ 24ನೇ, ಜುಲೈ 1969ರಂದು ಭೂಮಿಗೆ ಹಿಂದಿರುಗಿದರು. ಆದರೆ ಇದಲ್ಲ ಸುದ್ದಿ ...ಧರೆಗೆ ಮರಳುವುದಕ್ಕೆ ಮುನ್ನ ಗಗನಯಾತ್ರಿಗಳು ವಿವಿಧ ಸಾಧನ-ಸಲಕರಣೆಗಳು, ಸೇರಿದಂತೆ 106 ತ್ಯಾಜ್ಯಗಳನ್ನು ಅಲ್ಲಿಯೇ ಬಿಟ್ಟು ಬಂದರು. ಜತೆಗೆ ಅವರ ಮಲಮೂತ್ರಗಳು ಗುರುತ್ವಾಕರ್ಷಣೆ ಇಲ್ಲದ ಜಾಗ ಸೇರಿತ್ತು.
ಚಂದ್ರಗ್ರಹಣದ ದಿನ ಭೂಮಿಗೆ ಬಂದಿದ್ದವಾ ಏಲಿಯನ್..?
ಚಂದ್ರನಲ್ಲಿ ಬಿಟ್ಟು ಬಂದ ವಸ್ತುಗಳು ಯಾವವು?
ಭೂಮಿಗೆ ಹಿಂದಿರುಗುವ ವೇಳೆ ತೂಕ ಕಡಿಮೆ ಮಾಡಿಕೊಳ್ಳುವುದು ಕಿಬ್ಬರು ಗಗನ ಯಾತ್ರಿಗಳಿಗೆ ಮುಖ್ಯವಾಗಿತ್ತು. ಈ ಕಾರಣದಿಂದ ತಮ್ಮ ಶೂ, ಕೆಲ ಲೋಹದ ವಸ್ತುಗಳನ್ನು, ಸಲಕರಣೆಗಳನ್ನು ಅಲ್ಲಿಯೇ ಬಿಟ್ಟು ಬಂದರು. ಆದರೆ ಸಂಶೊಧನೆಗೆಂದು ಹಿಂದಕ್ಕೆ ಬರುವಾಗ ಸುಮಾರು 380 ಕೆಜಿಯಷ್ಟು ಚಂದ್ರನ ಮಣ್ಣು ಹೊತ್ತು ತಂದಿದ್ದರು.
ಅನಾಹುತದ ಸರಮಾಲೆ ಹೊತ್ತು ತರಲಿದೆಯಾ ರಕ್ತ ಚಂದ್ರಗ್ರಹಣ?
ಇದಾದ ಮೇಲೆ ಚಂದ್ರನಲ್ಲಿಗೆ ಒಂದೆಲ್ಲಾ ಒಂದು ದೇಶದವರು ತೆರಳತೊಡಗಿದರು. 1969 ರಿಂದ 1972 ರ ಅವಧಿಯಲ್ಲೇ ಚಂಧ್ರನ ಮೇಲೆ ಮಾನವ ಬಿಟ್ಟ ತ್ಯಾಜ್ಯದ ಲೆಕ್ಕ ಬರೋಬ್ಬರಿ 181,437 ಕೆಜಿ !ಇಂದು ಚಂದ್ರ ಒಂದು ರೀತಿಯ ಕಸ ಡಂಪ್ ಮಾಡುವ ತಾಣವಾಗಿ ಬದಲಾಗಿದ್ದಾನೆ. ಜಪಾನ್,ರಸ್ಯಾ, ಭಾರತ ಎಲ್ಲರೂ ಚಂದ್ರನಲ್ಲಿಗೆ ಹೆಜ್ಜೆ ಇಟ್ಟಿದ್ದು ಸಂಶೋಧನೆ ನಿರಂತರವಾಗಿದೆ.
