ಪೋಂಜಿ ಸ್ಕೀಮ್'ನಲ್ಲಿ ಆನ್'ಲೈನ್ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಇಂದು ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾದರು.  

ನವದೆಹಲಿ (ನ.09): ಪೋಂಜಿ ಸ್ಕೀಮ್'ನಲ್ಲಿ ಆನ್'ಲೈನ್ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಇಂದು ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾದರು.

ಉ.ಪ್ರದೇಶದ ಇ ಕಾಮರ್ಸ್ ಪೊಂಜಿ ಸ್ಕೀಮ್​'ನ ನಿರ್ದೇಶಕರು ಹಾಗೂ ಸಿದ್ಧಿಕಿ ನಡುವೆ ನಂಟಿದೆ ಎಂಬುದನ್ನು ಪತ್ತೆ ಹಚ್ಚಿದ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಸಿದ್ಧಿಕಿಗೆ ನೋಟಿಸ್ ನೀಡಿತ್ತು. ಕಂಪನಿಯಿಂದ 1.15 ಕೋಟಿ ಪಡೆದಿದ್ದರ ಬಗ್ಗೆ ಸಮಜಾಯಿಷಿ ಕೇಳಿತ್ತು. ಇಂದು ತಮ್ಮ ಸಹೋದರ ಹಾಗೂ ವಕೀಲರೊಂದಿಗೆ ಸಿದ್ಧಿಕಿ ವಿಚಾರಣೆಗೆ ಹಾಜರಾಗಿದ್ದಾರೆ.

ವೆಬ್​ಸೈಟ್​​ಗಳಲ್ಲಿ ಕೆಲಸದ ಆಸೆ ತೋರಿಸಿ ಆನ್​ಲೈನ್​ನಲ್ಲೇ ಹಣ ಕಟ್ಟಿಸಿಕೊಂಡು ಅಬೇಜ್ ಕಂಪೆನಿ ಸುಮಾರು 250 ಕೋಟಿ ವಂಚಿಸಿತ್ತು.