ಇಸ್ಲಾಮಾಬಾದ್‌[ಜ.04]: ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ಗೆ ಕೈದಿಯೊಬ್ಬನನ್ನು ಸಹಾಯಕನನ್ನಾಗಿ ನೀಡಲು ಪಂಜಾಬ್‌ನ ಪ್ರಾಂತೀಯ ಸರ್ಕಾರ ನಿರಾಕರಿಸಿದೆ. ಹೀಗಾಗಿ ಷರೀಫ್‌ ಇನ್ನು ಮುಂದೆ ತಮ್ಮ ಜೈಲಿನ ಕೋಣೆಯನ್ನು ತಾವೇ ಸ್ವಚ್ಛಗೊಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಹೋರ್‌ನ ಕೋಟ್‌ ಲಕಪತ್‌ ಜೈಲಿನಲ್ಲಿ ಷರೀಫ್‌ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮಾಜಿ ಪ್ರಧಾನಿ ಆಗಿರುವ ಕಾರಣಕ್ಕೆ ಜೈಲಿನಲ್ಲಿ ಉತ್ತಮ ಸೌಲಭ್ಯ ಹಾಗೂ ಸಹಾಯಕರನ್ನು ನೇಮಿಸಿಕೊಳ್ಳಲು ಷರೀಫ್‌ ಅರ್ಹರಾಗಿದ್ದರು.

ಆದರೆ, ಕೆಲಸಗಾರನನ್ನು ನೀಡಲು ಕೋರ್ಟ್‌ ನಿರಾಕರಿಸಿದ್ದು, ತಮ್ಮ ಕೋಣೆಯನ್ನು ತಾವೇ ನಿರ್ವಹಿಸಬೇಕು ಎಂದು ತಿಳಿಸಿದೆ.