Asianet Suvarna News Asianet Suvarna News

ನಾಸಾದಿಂದ ಶೌಚ ನಿರ್ವಹಣೆಯ ಬಾಹ್ಯಾಕಾಶ ಸೂಟ್ ನಿರ್ಮಾಣದ ಸವಾಲು

ಇದೀಗ ನಾಸಾ ಕನಿಷ್ಠ 144 ಗಂಟೆಗಳ ವರೆಗೆ, ಕೈಗಳನ್ನು ಬಳಸದೆ ಮಾನವ ತ್ಯಾಜ್ಯವನ್ನು ದೇಹದಿಂದ ಪ್ರತ್ಯೇಕಿಸುವ ಬಾಹ್ಯಾಕಾಶ ಸೂಟ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ನಾಸಾ ಬಯಸಿದೆ. ವ್ಯವಸ್ಥೆ ಬಾಹ್ಯಾಕಾಶದ ಸ್ಥಿತಿಗಳನ್ನು ನಿರ್ವಹಿಸುವಂತಿರಬೇಕು. ಆರು ದಿನಗಳ ಕಾಲ ಗಗನ ಯಾತ್ರಿಗಳನ್ನು ಆರೋಗ್ಯವಂತರನ್ನಾಗಿ ಕಾಪಾಡುವ ವ್ಯವಸ್ಥೆಯಾಗಿರಬೇಕು.

NASA Wants You to Take Part in Its Deep Space Poop Challenge

ವಾಷಿಂಗ್ಟನ್(ನ.25):ಬಾಹ್ಯಾಕಾಶದಲ್ಲಿ ಶೌಚ ನಿರ್ವಹಣೆ ಕುರಿತಂತೆ ಆರು ದಿನಗಳ ಕಾಲ ಕೈಗಳನ್ನು ಬಳಸದೆ, ಮಾನವ ತ್ಯಾಜ್ಯವನ್ನು ನಿರ್ವಹಿಸುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಸವಾಲನ್ನು ನಾಸಾ ಮುಂದಿಟ್ಟಿದೆ. 20 ಲಕ್ಷದ ಸವಾಲು ಇದಾಗಿದ್ದು, ಗಗನಯಾತ್ರಿಗಳಿಗೆ ಅಗತ್ಯವಿದ್ದಾಗ ಶೌಚಾಲಯ ನಿರ್ವಹಣೆಯ ಪೂರ್ಣ ಪ್ರಮಾಣದ ಬಾಹ್ಯಾಕಾಶ ಸೂಟ್ ರಚಿಸುವುದು ಗುರಿಯಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಬಾಹ್ಯಾಕಾಶ ಸೂಟ್‌ಗಳು ಗಗನಯಾತ್ರಿಗಳ ಬಾಹ್ಯಾಕಾಶ ಚಟುವಟಿಕೆಯ ವೇಳೆ ಅವರಿಗೆ ಯಾವುದಾದರೂ ಅನಿರೀಕ್ಷಿತ ಸಂದರ್ಭಗಳಿಂದ ರಕ್ಷಿಸುವಂಥದ್ದಾಗಿದೆ. ಇದು ಬಾಹ್ಯಾಕಾಶ ಪರಿಸರಕ್ಕೆ ಹಾನಿ ಮಾಡಬಲ್ಲುದಾಗಿದೆ. ಇದಕ್ಕೂ ಮೊದಲು ಡೈಪರ್ ಬಳಸಲಾಗುತಿತ್ತು. ಡೈಪರ್ ಒಂದು ತಾತ್ಕಾಲಿಕ ಪರಿಹಾರವಾಗಿದ್ದು, ಒಂದು ದಿನಕ್ಕಿಂತ ಹೆಚ್ಚು ಇದು ಆರೋಗ್ಯಕರವಲ್ಲ.

ಇದೀಗ ನಾಸಾ ಕನಿಷ್ಠ 144 ಗಂಟೆಗಳ ವರೆಗೆ, ಕೈಗಳನ್ನು ಬಳಸದೆ ಮಾನವ ತ್ಯಾಜ್ಯವನ್ನು ದೇಹದಿಂದ ಪ್ರತ್ಯೇಕಿಸುವ ಬಾಹ್ಯಾಕಾಶ ಸೂಟ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ನಾಸಾ ಬಯಸಿದೆ. ವ್ಯವಸ್ಥೆ ಬಾಹ್ಯಾಕಾಶದ ಸ್ಥಿತಿಗಳನ್ನು ನಿರ್ವಹಿಸುವಂತಿರಬೇಕು. ಆರು ದಿನಗಳ ಕಾಲ ಗಗನ ಯಾತ್ರಿಗಳನ್ನು ಆರೋಗ್ಯವಂತರನ್ನಾಗಿ ಕಾಪಾಡುವ ವ್ಯವಸ್ಥೆಯಾಗಿರಬೇಕು. ವ್ಯವಸ್ಥೆಯಲ್ಲಿ ಒಬ್ಬ ಗಗನಯಾತ್ರಿಯಿಂದ ಆರು ದಿನಗಳ ಕಾಲ, ದಿನವೊಂದಕ್ಕೆ ಕನಿಷ್ಠ ೧ ಲೀಟರ್ ಮೂತ್ರ ಸಂಗ್ರಹಣೆಗೆ ಅವಕಾಶವಿರಬೇಕು. ಅಲ್ಲದೆ ಇತರ ಎಲ್ಲ ಮಾನವ ದೇಹದ ತ್ಯಾಜ್ಯ ಸಂಗ್ರಹಕ್ಕೆ ಸೂಕ್ತ ಪ್ರಮಾಣದಷ್ಟು ಸಂಗ್ರಹಕ್ಕೆ ಅವಕಾಶವಿರಬೇಕು ಎಂದು ವರದಿಗಳು ತಿಳಿಸಿವೆ. ಈ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿ ನೀಡುವವರಿಗೆ ನಾಸಾ 20 ಲಕ್ಷ ಬಹುಮಾನ ನೀಡುತ್ತದೆ ಮತ್ತು ಈ ವ್ಯವಸ್ಥೆಯನ್ನು ಮುಂದಿನ ಮೂರು, ನಾಲ್ಕು ವರ್ಷಗಳ ಕಾಲ ಬಾಹ್ಯಾಕಾಶ ಯಾತ್ರೆಗಳಲ್ಲಿ ಬಳಸಲಾಗುತ್ತದೆ.      

Follow Us:
Download App:
  • android
  • ios