ತನ್ನದೇ ಅಂತಿಮ ಕ್ಷಣ ಸೆರೆಹಿಡಿದ ನಾಸಾ ಕ್ಯಾಮರಾ..!

First Published 25, May 2018, 11:12 AM IST
NASA camera captured its own demise
Highlights

ಗಗನ ನೌಕೆ ಉಡಾವಣೆ ಅಂದ್ರೆ ತಮಾಷೆ ಮಾತಲ್ಲ. ಅತೀ ತೂಕದ ಖಗೋಳ ಯಂತ್ರಗಳನ್ನು ಹೊತ್ತೊಯ್ಯುವ ರಾಕೆಟ್ ಗಳು ಬೆಂಕಿ ಉಗುಳುತ್ತಾ ಭೂಮಿಯ ಗುರುತ್ವ ಬಲಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಅವುಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯುವ ರೀತಿ ಅನನ್ಯ.

ಬೆಂಗಳೂರು (ಮೇ.25): ಗಗನ ನೌಕೆ ಉಡಾವಣೆ ಅಂದ್ರೆ ತಮಾಷೆ ಮಾತಲ್ಲ. ಅತೀ ತೂಕದ ಖಗೋಳ ಯಂತ್ರಗಳನ್ನು ಹೊತ್ತೊಯ್ಯುವ ರಾಕೆಟ್ ಗಳು ಬೆಂಕಿ ಉಗುಳುತ್ತಾ ಭೂಮಿಯ ಗುರುತ್ವ ಬಲಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಅವುಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯುವ ರೀತಿಯೇ ಅನನ್ಯ.

ಇಂತಹ ಹತ್ತು ಹಲವು ಅಂತರಿಕ್ಷ ನೌಕೆಗಳನ್ನು ನಾಸಾದ ರಾಕೆಟ್ ಗಳು ನಭಕ್ಕೆ ಕೊಂಡೊಯ್ದಿವೆ. ಆದರೆ ಅಸಲಿ ವಿಷಯ ಅದಲ್ಲ. ಇತ್ತೀಚೆಗೆ ನಾಸಾ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಅನ್ನು ನಭಕ್ಕೆ ಚಿಮ್ಮಿಸಿತು. ಈ ವೇಳೆ ರಾಕೆಟ್ ಉಡಾವಣೆಯ ಕ್ಷಣಗಳನ್ನು ಸೆರೆ ಹಿಡಿಯಲು ಛಾಯಾಗ್ರಾಹಕನೊಬ್ಬ ಕ್ಯಾಮೆರಾ ಹಿಡಿದು ಸಜ್ಜಾಗಿದ್ದ. ತನ್ನ ಕ್ಯಾಮೆರಾವನ್ನು ರಾಕೆಟ್ ಉಡಾವಣಾ ಸ್ಥಳದ ಸಮೀಪವೇ ಇಡಲಾಗಿತ್ಟ್ಟತು. ನೌಕೆ ಉಗುಳಿದ ಬೆಂಕಿಯ ಜ್ವಾಲೆಗೆ ಕ್ಯಾಮೆರಾವೇ ಕರಗಿ ಹೋಗಿದೆ.

ಇನ್ನೂ ವಿಚಿತ್ರ ಸಂಗತಿ ಅಂದ್ರೆ ಈ ಕ್ಯಾಮೆರಾ ತಾನೇ ಕರಗುತ್ತಿರುವ ದೃಶ್ಯಗಳನ್ನೂ ಸೆರೆಹಿಡಿದು ಅಚ್ಚರಿ ಮೂಡಿಸಿದೆ. ಕ್ಯಾಲಿಫೋರ್ನಿಯಾದ ವಾಯುನೆಲೆಯಿಂದ ಸ್ಪೇಸ್ ಎಕ್ಸ್ ಫಾಲ್ಕನ್ ರಾಕೆಟ್ ಉಡಾವಣೆ ಮಾಡಲಾಗಿತ್ತು. ಇಂಗಲ್ಸ್ ಬೆಗಾನ್ ಎಂಬ ಛಾಯಾಗ್ರಾಹಕ ತನ್ನ ಕ್ಯಾಮೆರಾವನ್ನು ಉಡಾವಣಾ ಸ್ಥಳದಲ್ಲಿ ಇರಿಸಿದ್ದ. ರಾಕೆಟ್ ಉಡಾವಣೆಯ ಸಂಪೂರ್ಣ ಚಿತ್ರಣ ಸೆರೆಯಾದರೂ ಸ್ಥಳದ ತಾಪಮಾನ ತಾಳಲಾರದೆ ಕ್ಯಾಮೆರಾ ಕರಗಿ ಹೋಗಿದೆ.

ಬೆಗಾನ್ ಅವರ ಅರ್ಧ ಕರಗಿ ಹೋಗಿರುವ ಕ್ಯಾಮರಾದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಲ್ಲದೇ ತನ್ನ ಅಂತಿಮ ಕ್ಷಣದಲ್ಲೂ ಕರ್ತವ್ಯ ನಿರ್ವಹಿಸಿದ ಕ್ಯಾಮೆರಾಗೆ ಎಲ್ಲಡೆಯಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

loader