ದಿಗಂತ ಜಾಲಾಡಲಿದ್ದಾರೆ ನಾಸಾದ ಹೊಸ ಗಗನಯಾತ್ರಿಗಳು

NASA Announce Future Mission Crew Members
Highlights

ಭವಿಷ್ಯದ ಅಂತರೀಕ್ಷ ಯೋಜನೆಗಳಿಗೆ ಸಜ್ಜಾಗಿರುವ ನಾಸಾ, ಈ ನಿಟ್ಟಿನಲ್ಲಿ 2019 ರಲ್ಲಿ ಎಕ್ಸ್ಪಿಡಿಶನ್ 59/60 ಮತ್ತು ಎಕ್ಸ್ಪಿಡಿಶನ್ 60/61 ಸರಣಿಯ ಗಗನನೌಕೆಯನ್ನು ಅಂತರೀಕ್ಷಕ್ಕೆ ಕಳುಹಿಸಲಿದೆ. ಹೊಸ ಗಗನಯಾತ್ರಿಗಳಿಗೆ ಭರ್ಜರಿ ತರಬೇತಿ ಕೊಡುತ್ತಿರುವ ನಾಸಾ, ಭವಿಷ್ಯದ ಬಾಹಾಕ್ಯಾಶ ಯೋಜನೆಗಳಿಗೆ ಸಿದ್ದತೆ ಮಾಡಿಕೊಂಡಿದೆ.

ಬೆಂಗಳೂರು(ಮೇ. 26): ಭವಿಷ್ಯದ ಅಂತರೀಕ್ಷ ಯೋಜನೆಗಳಿಗೆ ಸಜ್ಜಾಗಿರುವ ನಾಸಾ, ಈ ನಿಟ್ಟಿನಲ್ಲಿ 2019 ರಲ್ಲಿ ಎಕ್ಸ್ಪಿಡಿಶನ್ 59/60 ಮತ್ತು ಎಕ್ಸ್ಪಿಡಿಶನ್ 60/61 ಸರಣಿಯ ಗಗನನೌಕೆಯನ್ನು ಅಂತರೀಕ್ಷಕ್ಕೆ ಕಳುಹಿಸಲಿದೆ. ಹೊಸ ಗಗನಯಾತ್ರಿಗಳಿಗೆ ಭರ್ಜರಿ ತರಬೇತಿ ಕೊಡುತ್ತಿರುವ ನಾಸಾ, ಭವಿಷ್ಯದ ಬಾಹಾಕ್ಯಾಶ ಯೋಜನೆಗಳಿಗೆ ಸಿದ್ದತೆ ಮಾಡಿಕೊಂಡಿದೆ.

ಈ ಎರಡೂ ಯಾನಗಳಿಗೆ ನೂತನ ಗಗನಯಾತ್ರಿಗಳನ್ನು ನೇಮಿಸಿರುವ ನಾಸಾ, ಎರಡೂ ಯೋಜನೆಗಳು ಫಲಪ್ರದವಾಗುವ ನಿರೀಕ್ಷೆಯಲ್ಲಿದೆ. ಎಕ್ಸ್ಪಿಡಿಶನ್ 59/60 ಗೆ ಕ್ರಿಶ್ಚಿನಾ ಹ್ಯಾಮ್ಮಾಕ್ ಕೊಚ್ ಮತ್ತು ಎಕ್ಸ್ಪಿಡಿಶನ್ 60/61ಕ್ಕೆ ಆ್ಯಂಡ್ರೂ ಮಾರ್ಗನ್ ಅವರನ್ನು ನೇಮಿಸಲಾಗಿದೆ. ಎಕ್ಸ್ಪಿಡಿಶನ್ 59/60 ಏಪ್ರಿಲ್ 2019 ರಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದರೆ, ಎಕ್ಸ್ಪಿಡಿಶನ್ 60/61 ಜುಲೈ 2019 ರಲ್ಲಿ ತನ್ನ ಯಾತ್ರೆ ಆರಂಭಿಸಲಿದೆ.

ಈ ಇಬ್ಬರೂ 2013 ರಲ್ಲಿ ನಾಸಾದ ಗಗನಯಾತ್ರಿಗಳಾಗಿ ಆಯ್ಕೆಯಾಗಿದ್ದರು. ಸದ್ಯ ಐಎಸ್ ಎಸ್ ನಲ್ಲಿರುವ ಗಗನಯಾತ್ರಿಗಳು ಮುಂದಿನ ವರ್ಷ ಭೂಮಿಗೆ ಮರಳಿದ್ದು, ಕೊಚ್ ಮತ್ತು ಮಾರ್ಗನ್ ನೇತೃತ್ವದ ಗಗನಯಾತ್ರಿಗಳ ತಂಡ ಐಎಸ್ ಎಸ್ ಗೆ ಪ್ರಯಾಣ ಬೆಳೆಸಲಿದೆ. 

loader