ವಿಶ್ವದಲ್ಲಿಯೇ ಬಂಗಾರ ಕೈಗೊಳ್ಳುವ ರಾಷ್ಟ್ರಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ವರ್ಷದಲ್ಲಿ ಕೊಳ್ಳುವ ಮೂರನೇ ಒಂದರಷ್ಟು ಬಂಗಾರಕ್ಕೆ ಕಪ್ಪು ಹಣ ಬಳೆಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಜನರು ಅಡಗಿಸಿಟ್ಟಿರುವ ತೆರಿಗೆ ಕಟ್ಟದ ಹಣದಲ್ಲಿ ಈ ಬಂಗಾರ ಖರೀದಿಸುತ್ತಿದ್ದು, ಈ ಹಣಕ್ಕೆ ಅಕೌಂಟ್ಸ್ ಇಲ್ಲ ಎನ್ನಲಾಗಿದೆ.
ನವದೆಹಲಿ(ನ.25): ಕಪ್ಪು ಹಣದ ಮೇಲೆ ಸಮರ ಸಾರಿರುವ ಪ್ರಧಾನಮಂತ್ರಿ ನರೇಂದ್ರಮೋದಿ, 500 ಮತ್ತು 1000 ಸಾವಿರ ರೂಪಾಯಿ ನೋಟುಗಳನ್ನ ರದ್ದು ಮಾಡಿದ್ಧಾರೆ. ಇದೀಗ, ಮನೆಗಳಲ್ಲಿ ಇಟ್ಟುಕೊಂಡಿರುವ ಬಂಗಾರದ ಮೇಲೆ ಮೋದಿ ಕಣ್ಣು ಬಿದ್ದಿದೆ. ನ್ಯೂಸ್ ರೈಸ್ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ, ಮನೆಯಲ್ಲಿಟ್ಟಿರುವ ಬಂಗಾರಕ್ಕೂ ನಿಬಂಧನೆ ಹೇರುವ ಸಾಧ್ಯತೆ ಇದೆ.
