ಅಹಮದಾಬಾದ್[ಡಿ.23] ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಅಧಿಕಾರ ಕಳೆದುಕೊಂಡಿದ್ದರೂ ಬಿಜೆಪಿಯ ಗೆಲವುವನ್ನು ಇಲ್ಲಿ ಮಾತ್ರ ತಡೆಯಲು ಸಾಧ್ಯವಾಗಿಲ್ಲ. ಗುಜರಾತ್‌ನ ಉಪಚುನಾವಣೆಯಲ್ಲಿ ಕಮಲ ಅರಳಿದೆ.

99 ಶಾಸಕರ ಬಲ ಹೊಂದಿದ್ದ ಬಿಜೆಪಿ ಶತಕ ಬಾರಿಸಿದೆ.  ಜಸ್ದಾನ್ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕುನಾರ್ಜಿ ಬವಾಲಿಯಾ ಕಾಂಗ್ರೆಸ್ ನ ಅಭ್ಯರ್ಥಿ ಅವ್ಸರ್ ನಕಿಯಾ ಅವರನ್ನು 19,779 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.

ಮೋದಿ ಸರ್ಕಾರದಿಂದ ಹೊಸ ವರ್ಷಕ್ಕೆ ಜನರಿಗೆ ಭರ್ಜರಿ ಕೊಡುಗೆ

ಬವಾಲಿಯಾ 2017 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಕೇವಲ 3 ಗಂಟೆಗಳಲ್ಲಿ ಬವಾಲಿಯಾಗೆ ಗುಜರಾತ್ ಸಂಪುಟದಲ್ಲಿ ಸ್ಥಾನವೂ ಸಿಕ್ಕಿತ್ತು.  ಈ ಗೆಲುವಿನ ಪರಿಣಾಮ ಬಿಜೆಪಿ ಶತಕ ಬಾರಿಸಿದ್ದರೆ ಕಾಂಗ್ರೆಸ್ 77 ರಿಂದ 76ಕ್ಕೆ ಇಳಿದಿದೆ.