2007ರಲ್ಲಿ ಬಿಡುಗಡೆಯಾದ 'ಚಲುವಿನ ಚಿತ್ತಾರ' ಕನ್ನಡ ಸಿನಿಮಾ ಪ್ರೇಮಿಗಳಲ್ಲಿ ಇಂದಿಗೂ ಮನೆಮಾತಾಗಿರುವ ಸಿನಿಮಾ. ಪ್ರೇಮಕಥೆ ದುರಂತದಲ್ಲಿ ಅಂತ್ಯಕಂಡ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಅದ್ಭುತವಾಗಿ ನಟಿಸಿದ್ದರೆ, ಅಷ್ಟೆ ಅಚ್ಚುಕಟ್ಟಾಗಿ ತೆರೆಯ ಮೇಲೆ ಇಳಿಸಿದ್ದರು ನಿರ್ದೇಶಕ ಎಸ್. ನಾರಾಯಣ್. ಆದರೆ ಇದೇ ಸಿನಿಮಾ ಈಗ ಇಬ್ಬರ ವೈಮನಸ್ಸಿಗೆ ಕಾರಣವಾಗಿದೆ.
ಬೆಂಗಳೂರು(ಫೆ.26): ಗಾಂಧಿನಗರದಲ್ಲಿ ನಿರ್ದೇಶಕ ಹಾಗೂ ನಟರ ನಡುವೆ ಕೋರ್ಟ್ ವಾರ್ ಶುರುವಾಗಿದೆ. ಅದು 10 ವರ್ಷಗಳ ಹಿಂದೆ ತೆರೆಕಂಡ ಸಿನಿಮಾಕ್ಕೆ ಸಂಬಂಧಿಸಿದಂತೆ. ಆ ಚಿತ್ರ ಇಬ್ಬರಿಗೂ ಬ್ರೇಕ್ ಕೊಟ್ಟಿತ್ತು. ಆದರೆ ಈಗ ಅದೇ ಸಿನಿಮಾದಿಂದ ಇಬ್ಬರಿಗೂ ಮನಸ್ತಾಪ ಶುರುವಾಗಿ ಕೋರ್ಟ್ ಮೆಟ್ಟಿಲೇರಿದೆ.
2007ರಲ್ಲಿ ಬಿಡುಗಡೆಯಾದ 'ಚಲುವಿನ ಚಿತ್ತಾರ' ಕನ್ನಡ ಸಿನಿಮಾ ಪ್ರೇಮಿಗಳಲ್ಲಿ ಇಂದಿಗೂ ಮನೆಮಾತಾಗಿರುವ ಸಿನಿಮಾ. ಪ್ರೇಮಕಥೆ ದುರಂತದಲ್ಲಿ ಅಂತ್ಯಕಂಡ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಅದ್ಭುತವಾಗಿ ನಟಿಸಿದ್ದರೆ, ಅಷ್ಟೆ ಅಚ್ಚುಕಟ್ಟಾಗಿ ತೆರೆಯ ಮೇಲೆ ಇಳಿಸಿದ್ದರು ನಿರ್ದೇಶಕ ಎಸ್. ನಾರಾಯಣ್. ಆದರೆ ಇದೇ ಸಿನಿಮಾ ಈಗ ಇಬ್ಬರ ವೈಮನಸ್ಸಿಗೆ ಕಾರಣವಾಗಿದೆ.
ಚಲುವಿನ ಚಿತ್ತಾರ ಸಿನಿಮಾದಲ್ಲಿ ಜಾಹಿರಾತು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಫೋಟೊ ಬಳಕೆ ಮಾಡಿಕೊಳ್ಳಲಾಗಿತ್ತು. ಫೋಟೊ ಬಳಸಿಕೊಂಡಿದ್ದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಂಭಾವನೆಯು ದೊರಕಿತ್ತು. ಒಪ್ಪಂದದ ಪ್ರಕಾರ ಸಂಭಾವನೆಯಲ್ಲಿ ನನಗೂ ಪಾಲು ಕೊಡಬೇಕಿತ್ತು. ಆದರೆ ಪೂರ್ತಿ ಪಾಲನ್ನು ನಿರ್ದೇಶಕ ನಾರಾಯಣ್ ಒಬ್ಬರೆ ತೆಗೆದುಕೊಂಡಿದ್ದಾರೆ. ಒಪ್ಪಂದದ ಪ್ರಕಾರ ನನಗೂ ಪಾಲು ನೀಡಿರದ ಕಾರಣ ಎಸ್. ನಾರಾಯಣ ಅವರು 75 ಲಕ್ಷ ನೀಡಬೇಕೆಂದು ಕೋರ್ಟ್ ಮೂಲಕ ನೋಟಿಸ್ ಕಳುಹಿಸಿದ್ದಾರೆ.
ನೋಟಿಸ್'ನಿಂದ ಸಿಡಿಮಿಡಿಗೊಂಡ ನಿರ್ದೇಶಕ ಎಸ್. ನಾರಾಯಣ್ ' ನಾನು ಬೆಳಸಿದ ಹುಡುಗ ನನಗೆ ನೋಟಿಸ್ ನೀಡಿ ನನಗೆ ಅವಮಾನ ಉಂಟು ಮಾಡಿದ್ದಾನೆ. ಈ ಅವಮಾನಕ್ಕೆ ಪ್ರತಿಯಾಗಿ ಗಣೇಶ್ 10 ಕೋಟಿ ಪರಿಹಾರ ನೀಡಬೇಕೆಂದು ಗೋಲ್ಡನ್ ಸ್ಟಾರ್'ಗೆ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿದ್ದು, ಕೂಡಲೇ ಕೇಸ್ ವಾಪಸ್ ಪಡೆಯಬೇಕೆಂದು ಗಣೇಶ್'ಗೆ ನಾರಾಯಣ್ ಒತ್ತಾಯಿಸಿದ್ದಾರೆ.