ವಿವಿಧ ರಾಜ್ಯ, ಭಾಷೆ, ದೇಶ ಸೇರಿದಂತೆ ಒಂದುವರೆ ಕೋಟಿಗೂ ಹೆಚ್ಚಿನ ಜನರು ಉದ್ಯಾನ ನಗರಿಯಲ್ಲಿ ನೆಲಸಿದ್ದಾರೆ.ಹಲವರು ಬೆಂಗಳೂರು ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಲು ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಸಮಯವೂ ಬಂದುಬಿಟ್ಟಿದೆ. ನಮ್ಮ ಬೆಂಗಳೂರು ಪ್ರಶಸ್ತಿ- 2016 ಪ್ರದಾನ ಸಮಾರಂಭ ಇಂದು ಸಂಜೆ ಟೌನ್ ಹಾಲ್ ನಲ್ಲಿ ನಡೆಯುತ್ತಿದೆ.
ಬೆಂಗಳೂರು(ಮಾ.12): ವಿವಿಧ ರಾಜ್ಯ, ಭಾಷೆ, ದೇಶ ಸೇರಿದಂತೆ ಒಂದುವರೆ ಕೋಟಿಗೂ ಹೆಚ್ಚಿನ ಜನರು ಉದ್ಯಾನ ನಗರಿಯಲ್ಲಿ ನೆಲಸಿದ್ದಾರೆ.ಹಲವರು ಬೆಂಗಳೂರು ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಲು ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಸಮಯವೂ ಬಂದುಬಿಟ್ಟಿದೆ. ನಮ್ಮ ಬೆಂಗಳೂರು ಪ್ರಶಸ್ತಿ- 2016 ಪ್ರದಾನ ಸಮಾರಂಭ ಇಂದು ಸಂಜೆ ಟೌನ್ ಹಾಲ್ ನಲ್ಲಿ ನಡೆಯುತ್ತಿದೆ.
ಸಂಸದ ರಾಜೀವ್ ಚಂದ್ರಶೇಖರ್ ಅವರು 2009ರಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ ಪ್ರಾರಂಭಿಸಿ, ಯಾವುದೇ ರೀತಿಯ ಪ್ರಚಾರ ಇಷ್ಟಪಡದೆ ಬೆಂಗಳೂರು ನಗರದ ಏಳಿಗೆಗೆ ಶ್ರಮಿಸುವವರನ್ನು ಗೌರವಿಸುವ 8ನೇ ವರ್ಷದ ನಮ್ಮ ಬೆಂಗಳೂರು ಪ್ರಶಸ್ತಿ - 2016 ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಇದೆ. ಕಳೆದ ಏಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ನಮ್ಮ ಬೆಂಗಳೂರು ಪ್ರಶಸ್ತಿ – 2016 ಪ್ರಸಕ್ತ ಸಾಲಿನ ಸಮಾರಂಭ ಜೆ.ಸಿ.ರಸ್ತೆಯಲ್ಲಿರುವ ಟೌನ್ ಹಾಲ್ ನಲ್ಲಿ ಇಂದು ಸಂಜೆ 6.ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇನ್ನು ಪ್ರಸಕ್ತ ವರ್ಷದಲ್ಲಿ ಐದು ವಿಭಾಗದಲ್ಲಿ ನೀಡಲಾಗುವ ಪ್ರಶಸ್ತಿಗಳಿಗೆ ಅಂತಿಮವಾಗಿ ಕಣದಲ್ಲಿರುವವವರ ವಿವರ ಇಲ್ಲಿದೆ.
- ಸೇವೆ: ಸರ್ಕಾರಿ ಸೇವಾ ವಿಭಾಗದಲ್ಲಿ ಕೋರಮಂಗಲ ಠಾಣೆ ಇನ್ಸ್‍ಪೆಕ್ಟರ್ ಆರ್.ಎಂ.ಅಜಯ್, ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಕಾರಿ ದೀಪಕ್ ಭಾಜ್‍ಪಯ್, ಬೊಮ್ಮನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್, ಎಚ್‍ಎಸ್‍ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ದನ್, ಬಿಬಿಎಂಪಿಯ ಅರಣ್ಯ ವಿಭಾಗದ ಜಗನ್ನಾಥರಾವ್, ಮಿಂಟೋ ಆಸ್ಪತ್ರೆ ನಿರ್ದೇಶಕ ತ್ಯಾಮಗೊಂಡ್ಲು ಕೃಷ್ಣಮೂರ್ತಿ ರಮೇಶ್ ಮತ್ತು ಬೆಂಗಳೂರು ನಗರ ಜಿಲ್ಲಾಕಾರಿ ವಿ.ಶಂಕರ್ ಅವರು ಹೆಸರು ಅಂತಿಮ ಪಟ್ಟಿಯಲ್ಲಿವೆ.
- ಉದ್ಯಮಶೀಲರು: ಅಜಂತಾ ಚಂದನ್, ಅಶೋಕ್ ಗಿರಿ, ಜಾಸ್ಮಿನ್, ಜಯರಾಂ ಎಚ್.ಆರ್., ರೋಷಿಣಿ ಮುಖರ್ಷಿ, ಶ್ರದ್ಧಾ ಶರ್ಮ, ಸುನಿಲ್ ಶರವಣ, ಶ್ರೀಕೃಷ್ ಮತ್ತು ವಿದ್ಯಾ, ವಿಜಯರಾಜ್ ಸಿಸೋಡಿಯಾ ಅವರುಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
- ವಿಭಾಗ : ಚೇತನ್ ಆರ್., ಧನ್ಯಾ ರಾಜೇಂದ್ರನ್, ಕೀರ್ತಿ ಪ್ರಸಾದ್, ನಿರಂಜನ್ ಕಾಗೇರಿ, ಶ್ರೀಲೋಕ್ ಎಂ.ಎಲ್., ಸೋಮಣ್ಣ ಮಾಚಿಮಾಡ ಮತ್ತು ಯತೀಶ್ ಕುಮಾರ್.
- ಶ್ರೇಷ್ಠ ನಾಗರಿಕ : ಡಾ.ಟಿ.ವಿ.ರಾಮಚಂದ್ರ, ಡಾ.ವಿಜಯಲಕ್ಷ್ಮಿ ದೇಶಮಾನೆ, ಗೀತಾ ಮೆನನ್, ಸುರೇಶ್ ಮೀನ, ಎಚ್.ಜಿ.ಸುಶೀಲಮ್ಮ ಮತ್ತು ವಿ.ಎಸ್.ಬಸವರಾಜ್ ಅವರುಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.
- ರ ವರ್ಷದ ನಮ್ಮ ಬೆಂಗಳೂರಿಗ: ಐಶ್ವರ್ಯ ಬಿ.ಎಸ್., ಐಶ್ವರ್ಯ ಕೆ.ಮೂರ್ತಿ, ಅಮಿತ್ ಅಮರನಾಥ್, ಹರ್ಷಲ್ ಮಿತ್ತಲ್, ಕಿರಣ್ ಎ.ನಿರಂಜನ್ ಮುಕುಂದನ್ ಮತ್ತು ಶಾಶ್ವತ್ ವೇಲ್.
ಒಟ್ನಲ್ಲಿ ಟೌನ್ ಹಾಲ್ ಇಳಿಸಂಜೆಯ ಹೊತ್ತಲ್ಲಿ ನಮ್ಮ ಬೆಂಗಳೂರು ಪ್ರಶಸ್ತಿ-2016 ಭಾಜನರಾದವರು ಹೆಸರು ಬಹಿರಂಗವಾಗಲಿದೆ. ಸಹಜವಾಗಿ ಕುತೂಹಲ ಗರಿಗೇದರಿದ್ದು, ಅಂತಿಮವಾಗಿ ಬೆಂಗಳೂರು ಪ್ರಶಸ್ತಿ-2016 ಯಾರ್ಯಾರ ಮಡಿಲಿಗೆ ಸೇರಲಿದೆ ಎಂಬುದಕ್ಕೆ ನೀವೆಲ್ಲಾ ಕೆಲವು ಗಂಟೆಗಳು ಕಾಯಲೇಬೇಕು.
