ಸಾಮಾನ್ಯವಾಗಿ ಸಿನಿಮಾ ನಟರು, ರಾಜಕೀಯದವರು, ಕ್ರಿಕೆಟ್ ದಿಗ್ಗಜರು, ಸೆಲೆಬ್ರಿಟಿಗಳ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಪಡುವವರೇ ಜಾಸ್ತಿ. ಮೈಸೂರಿನ ಈ ಯುವಕ ಸ್ವಲ್ಪ ಡಿಫರೆಂಟ್. ಇಂದು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರ ಹುಟ್ಟುಹಬ್ಬ. ಅವರಿಗೆ ಒಳ್ಳೆಯದಾಗಲಿ ಎಂದು ಚಾಮುಂಡಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದಾನೆ. 

ಎದೆಯಲ್ಲಿ ಸುಧಾಮೂರ್ತಿ ಅವರ ಟ್ಯಾಟೋ ಹಾಕಿಸಿಕೊಳ್ಳುವುದರ ಮೂಲಕ ಅಭಿಮಾನ ಮೆರೆದಿದ್ದಾನೆ.  ತನ್ನ ತಾಯಿಯಂತೆ ಸುಧಾಮೂರ್ತಿಯವರನ್ನೂ ಪ್ರೀತಿಸುವ ಮೈಸೂರಿನ ಜೆಸಿ ನಗರದ ನಿವಾಸಿ ಲೋಕೇಶ್, ತನ್ನ ಬಲಗೈ ಮೇಲೆ ಮತ್ತು ಎದೆಯಲ್ಲಿ ಸುಧಾಮೂರ್ತಿಯವರ ಟ್ಯಾಟೋ ಹಾಕಿಸಿ ಅಭಿಮಾನ ಮೆರೆದಿದ್ದಾನೆ. ‘ನಾನು ಅತಿಯಾಗಿ ಪ್ರೀತಿಸುವ ನನ್ನ ಅಮ್ಮ ನಂತೆಯೇ ಸುಧಾಮೂರ್ತಿಯವರನ್ನ ಪ್ರೀತಿಸ್ತಿನಿ. ಅವ್ರೇ ನಂಗೇ ಸ್ಫೂರ್ತಿ. ಅವ್ರಿಗಿರೋ ಸಮಾಜ ಕಾಳಜಿ, ಪ್ರತಿಯೊಬ್ಬರನ್ನು ಪ್ರೀತಿಸುವ ಗುಣ, ಕಷ್ಟದಲ್ಲಿರುವರಿಗೆ ನೆರವಾಗುವುದು, ಅದ್ರಲ್ಲೂ ಸಾವಿರಾರು ಕೋಟಿಯ ಒಡತಿಯಾಗಿದ್ರೂ ಕೂಡ ಅವರ ಸರಳತೆ ಇದೆಲ್ಲಾ ನನಗೆ ಸ್ಫೂರ್ತಿ ಎನ್ನುತ್ತಾನೆ ಲೋಕೇಶ್.

ಇಲ್ಲಿದೆ ನೋಡಿ ಟ್ಯಾಟೂ ವಿಡಿಯೋ. 

"