Asianet Suvarna News Asianet Suvarna News

ಕೇರಳದಲ್ಲಿ ನಿರ್ಮಾಣವಾಗುತ್ತಿದೆ ಮೈಸೂರು ಅರಮನೆ

ಕೇರಳದ ವಿವಾದಿತ ಮದ್ಯ ದೊರೆ ಮತ್ತು ರಾಜಕಾರಣಿ ಡಾ. ಬಿಜು ರಮೇಶ್ ತಮ್ಮ ಪುತ್ರಿ ಮೇಘಾ ವಿವಾಹವನ್ನ ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ರಾಜಧಾನಿ ಬಿಸಿನೆಸ್ ಎಂಪೈರ್`ನ ಛೇರ್ಮನ್ ಮತ್ತು ಎಂಡಿಯಾಗಿದ್ದು, ಅಣ್ಣಾಡಿಎಂಕೆಯಿಂದ ತಿರುವನಂತಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

Mysore palace recreated for massive wedding

ತಿರುವನಂತಪುರ(ಡಿ.03): ನಾಳೆ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಮೈಸೂರು ಅರಮನೆ ಮತ್ತು ಗುಜರಾತಿನ ಅಕ್ಷರಧಾಮಗಳು ಝಗಮಗಿಸಲಿವೆ. ಇದು ಕೇರಳದಲ್ಲಿ ನಭೂತೋ ನಭವಿಷ್ಯತ್ ಎಂಬಂತೆ ನಡೆಯುತ್ತಿರುವ ಅದ್ಧೂರಿ ಮದುವೆ. ಇತ್ತೀಚೆಗೆ ತಾನೇ ಗಣೀ ಧಣಿ ಜನಾರ್ದನರೆಡ್ಡಿ ಇಡೀ ದೇಶವೇ ತನತ್ತ ನೋಡವಂತೆ ಅದ್ಧೂರಿ ವಿವಾಹ ಮಾಡಿದ್ದರು. ಅದೇ ರೀತಿಯ ಅದ್ದೂರಿ ವಿವಾಹ ನಾಳೆ ತಿರುವನಂತಪುರದಲ್ಲಿ ನಡೆಯಲಿದೆ.

ಕೇರಳದ ವಿವಾದಿತ ಮದ್ಯ ದೊರೆ ಮತ್ತು ರಾಜಕಾರಣಿ ಡಾ. ಬಿಜು ರಮೇಶ್ ತಮ್ಮ ಪುತ್ರಿ ಮೇಘಾ ವಿವಾಹವನ್ನ ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ರಾಜಧಾನಿ ಬಿಸಿನೆಸ್ ಎಂಪೈರ್`ನ ಛೇರ್ಮನ್ ಮತ್ತು ಎಂಡಿಯಾಗಿದ್ದು, ಅಣ್ಣಾಡಿಎಂಕೆಯಿಂದ ತಿರುವನಂತಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ವರ ಅಜಯ್ ಕೃಷ್ಣನ್ ಬೇರಾರೂ ಅಲ್ಲ. ಕೇರಳದ ಮಾಜಿ ಕಂದಾಯ ಸಚಿವ, ಹಾಲಿ ಕಾಂಗ್ರೆಸ್ ಎಂಎಲ್ಎ ಅದೂರ್ ಪ್ರಕಾಶ್ ಪುತ್ರ..

ಮದುವೆಗಾಗಿ ಬಿಜು ರಮೇಶ್ ಕೋಟಿ ಕೋಟಿ ವೆಚ್ಚದಲ್ಲಿ ತಿರುವನಂತಪುರದಲ್ಲಿ ಮೈಸೂರು ಪ್ಯಾಲೇಸ್ ಮತ್ತು ಅಕ್ಷರಧಾಮ ದೇಗುವನ್ನ ಪ್ರತಿಕೃತಿಗಳನ್ನ ನಿರ್ಮಿಸುತ್ತಿದ್ದಾರೆ.

ಮೈಸೂರು ಅರಮನೆಯ ಪ್ರತಿಕೃತಿಯಲ್ಲಿ 20 ಸಾವಿರ ಅತಿಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅರಮನೆಗೆ ಎಂಟ್ರಿಯಾಗುವ ಅತಿಥಿಗಳು ಮುಂದುವರೆದು ದೇಗಲದಲ್ಲಿ ನಡೆಯುವ ಮದುವೆಯಲ್ಲಿ ಭಾಗವಹಿಸುತ್ತಾರೆ. 80,000 ಚದರಡಿಯಲ್ಲಿ ಮಂಟಪ ನಿರ್ಮಿಸಲಾಗಿದ್ದು, 8 ಎಕರೆಯಲ್ಲಿ ಮದುವೆಯ ಸೆಟ್ ಹಾಕಲಾಗಿದೆ. ಮದುವೆಯಲ್ಲಿ ಗಣ್ಯಾತಿಗಣ್ಯರು ಭಾಗವಹಿಸುವ ಸಾಧ್ಯತೆ ಇದೆ. ಅನಾಣ್ಯೀಕರಣದ ಈ ಸಂದರ್ಭದಲ್ಲಿ ಇಂತಹ ಅದ್ದೂರಿ ಮದುವೆಗೆ ಹಣ ಹೊಂದಿಸಿದ್ದಾದರೂ ಎಂಬ ಯಕ್ಷ ಪ್ರಶ್ನೆಗೆ ಬಿಜು ರಮೇಶ್ ಉತ್ತರಿಸಬೇಕಿದೆ.