ದಕ್ಷ ಅಧಿಕಾರಿ ಡಿ.ಕೆ ರವಿ ಅನುಮಾಸ್ಪದ ಸಾವಿಗೆ ಸಿಬಿಐ ತೆರೆ ಎಳೆದಿದೆ. ಸುದೀರ್ಘ 20 ತಿಂಗಳ ಬಳಿಕ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಡಿಕೆ ರವಿಯದ್ದು ಆತ್ಮಹತ್ಯೆ ಎಂದು ಋಜುವಾತು ಮಾಡಿದೆ. ಈ ಸಂಬಂಧ ಡಿ.ಕೆ ರವಿ ತಾಯಿ ಗೌರಮ್ಮ ಪ್ರತಿಕ್ರಿಯೆ ನೀಡಿದ್ದು, ನಮ್ಮ ಮಗ ದಕ್ಷನಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಾಗಿರಲಿಲ್ಲ. ಸಿಬಿಐನಿಂದಲೂ ಕೂಡ ನಮಗೆ ನ್ಯಾಯ ಸಿಗಲಿಲ್ಲ ಎಂದು ಅಸಮಧಾನ ಹೊರಹಾಕಿದರು. ಸಿಬಿಐನವರು ಕೇವಲ ಒಂದುಬಾರಿ ಬಂದು ಮಾಹಿತಿ ತಗೊಂಡಿದ್ದರು, ಮರು ಮರಣೋತ್ತರ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದರು ಆದರೆ ಅದನ್ನು ಮಾಡಿಲ್ಲ ಎಂದು ಸಿಬಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು(ನ.25): ದಕ್ಷ ಅಧಿಕಾರಿ ಡಿ.ಕೆ ರವಿ ಅನುಮಾಸ್ಪದ ಸಾವಿಗೆ ಸಿಬಿಐ ತೆರೆ ಎಳೆದಿದೆ. ಸುದೀರ್ಘ 20 ತಿಂಗಳ ಬಳಿಕ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಡಿಕೆ ರವಿಯದ್ದು ಆತ್ಮಹತ್ಯೆ ಎಂದು ಋಜುವಾತು ಮಾಡಿದೆ.
ಈ ಸಂಬಂಧ ಡಿ.ಕೆ ರವಿ ತಾಯಿ ಗೌರಮ್ಮ ಪ್ರತಿಕ್ರಿಯೆ ನೀಡಿದ್ದು, ನಮ್ಮ ಮಗ ದಕ್ಷನಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಾಗಿರಲಿಲ್ಲ. ಸಿಬಿಐನಿಂದಲೂ ಕೂಡ ನಮಗೆ ನ್ಯಾಯ ಸಿಗಲಿಲ್ಲ ಎಂದು ಅಸಮಧಾನ ಹೊರಹಾಕಿದರು. ಸಿಬಿಐನವರು ಕೇವಲ ಒಂದುಬಾರಿ ಬಂದು ಮಾಹಿತಿ ತಗೊಂಡಿದ್ದರು, ಮರು ಮರಣೋತ್ತರ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದರು ಆದರೆ ಅದನ್ನು ಮಾಡಿಲ್ಲ ಎಂದು ಸಿಬಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುವುದು ನಮ್ಮ ಆಗ್ರಹ. ನ್ಯಾಯಾಂಗ ತನಿಖೆಯೂ ಆಗಬೇಕು ಎಂದು ಗೌರಮ್ಮ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲದೆ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಹೇಳಿದರು.
ಈ ನಡುವೆ ಡಿಕೆ ರವಿ ಸಮಾಧಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಹೆಚ್ಚುವರಿಯಾಗಿ ಒಂಡು ಡಿ ಆರ್ ತುಕಡಿ ನಿಯೋಜನೆ ಮಾಡಲಾಗಿದೆ.
